ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಟಿ-20 ಚಾಂಪಿಯನ್ ಪಟ್ಟಕ್ಕೆ ಮದುವಣಗಿತ್ತಿಯಂತೆ ಎಂಸಿಜಿ ಕ್ರೀಡಾಂಗಣ ಶೃಂಗಾರಗೊಂಡಿದೆ. ಈ ರೋಮಾಂಚಕ ಪಂದ್ಯವನ್ನು ನೋಡಲು ವಿಶ್ವದಾಖಲೆಯ ಪ್ರೇಕ್ಷಕರು ಈಗಾಗಲೇ ಕೌತುಕದಿಂದ ಕಾಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧ ಮಳೆಯಿಂದಾಗಿ ಒತ್ತಡದಲ್ಲಿ ಆಡಿ ಸೆಮಿಫೈನಲ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡ ವಿಶ್ವಾಸದಿಂದ ಬೀಗುತ್ತಿದ್ದರೆ, ಸೆಮಿಫೈನಲ್ ಆಡದೇ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಗುರುವಾರ ಸಿಡ್ನಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಮೊದಲ ಬಾರಿಗೆ ಫೈನಲ್ ಗೆ ಪ್ರವೇಶಿಸಿರುವ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಭಾನುವಾರ ಕಿಕ್ಕಿರಿದು ತುಂಬಿರುವ ಮೆಲ್ಬರ್ನ್ ನ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಅನ್ನು ಎತ್ತಿ ಹಿಡಿಯಲು ಉತ್ಸುಕರಾಗಿದ್ದು, ರೋಚಕ ಸೆಣಸಾಟವನ್ನು ಎದುರು ನೋಡಬಹುದಾಗಿದೆ
ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!
ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...








