T20 Women’s World Cup: ವನಿಯತೆಯರ T20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ…
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ಕ್ಕೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಹರ್ಮನ್ಪ್ರೀತ್ ಕೌರ್ ತಂಡದ ನಾಯಕಿಯಾಗಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಗಾಯಾಳು ಪೂಜಾ ವಸ್ತ್ರಾಕರ್ ತಂಡಕ್ಕೆ ಮರಳಿ ಸೇರ್ಪಡೆಯಾದಗಿದ್ದಾರೆ.
ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ
8 ನೇ ಟಿ 20 ವಿಶ್ವಕಪ್ 2023 ರ ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದೆ. ಭಾರತ. ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳ ಜೊತೆಗೆ ಬಿ ಗ್ರೂಪ್ ನಲ್ಲಿದೆ. ಫೆಬ್ರವರಿ 12 ರಂದು ಕೇಪ್ ಟೌನ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೊದಲ ಪಂದ್ಯವನ್ನ ಆಡಲಿದೆ.
ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 23 ಮತ್ತು 24 ರಂದು ಗ್ರೂಪ್-1 ಮತ್ತು ಗ್ರೂಪ್-2 ರ ಅಗ್ರ ಎರಡೆರಡು ತಂಡಗಳ ನಡುವೆ ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯ ಫೆ.26ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ನಡೆಯಲಿದೆ.
2009 ರಲ್ಲಿ ಆರಂಭವಾದ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ 5 ಬಾರಿ ಗೆದ್ದಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಲಾ ಒಮ್ಮೆ ಚಾಂಪಿಯನ್ ಆಗಿವೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ಫೈನಲ್ ತಲುಪಿತ್ತು. ಆದರೆ, ಆಸ್ಟ್ರೇಲಿಯಾ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು.
ಟಿ 20 ವಿಶ್ವಕಪ್ ಗೆ ಭಾರತ ತಂಡ ಇಂತಿದೆ :
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ಕೀಪರ್), ರಿಶಾ ಘೋಷ್ (ವಿಕೆಟ್ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್ ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಶಿಖಾ ಪಾಂಡೆ.
ಮೀಸಲು ಆಟಗಾರರಾಗಿ ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ ಮತ್ತು ಮೇಘನಾ ಸಿಂಗ್ ಆಯ್ಕೆಯಾಗಿದ್ದಾರೆ.
T20 Women’s World Cup: Indian team announced for Women’s T20 World Cup