ಟಿ-20 ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ
14ನೇ ಆವೃತ್ತಿ IPL ಮುಗಿಯುತ್ತಿದ್ದಂತೆ ಚುಟುಕು ಕ್ರಿಕೆಟ್ ನ ಮಹಾ ಸಂಗ್ರಾಮ ನಡೆಯಲಿದೆ.
ಅಕ್ಟೋಬರ್ 15ರಂದು ಫೈನಲ್ನೊಂದಿಗೆ ಐಪಿಎಲ್ 14ನೇ ಆವೃತ್ತಿ ಕೊನೆಗೊಳ್ಳಲಿದೆ.
ಇದಾದ ಬಳಿಕ ಅಕ್ಟೋಬರ್ 17ಕ್ಕೆ ಟಿ-20 ವಿಶ್ವಕಪ್ ಆರಂಭಗೊಳ್ಳಲಿದ್ದು, ನವೆಂಬರ್ 14ರಂದು ಕೊನೆಗೊಳ್ಳಲಿದೆ.
ಈ ಮಧ್ಯೆ ಹೆಚ್ಚಿನ ತಂಡಗಳಿಗೆ ಸ್ಪರ್ಧೆಗಳು ನಡೆಯುವುದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಅಕ್ಟೋಬರ್ 18ರಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ.
ಅಕ್ಟೋಬರ್ 20 ರಂದು ಮತ್ತೆ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಇನ್ನು ಅಕ್ಟೋಬರ್ 18ರಂದು ಅಫ್ಘಾನಿಸ್ತಾನ ವರ್ಸಸ್ ದಕ್ಷಿಣ ಆಫ್ರಿಕಾ. ಪಾಕಿಸ್ತಾನ ವರ್ಸಸ್ ವೆಸ್ಟ್ ಇಂಡೀಸ್.
ಆಸ್ಟ್ರೇಲಿಯಾ ವರ್ಸಸ್ ನ್ಯೂಜಿಲೆಂಡ್. ಭಾರತ ವರ್ಸಸ್ ಇಂಗ್ಲೆಂಡ್ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಅಕ್ಟೋಬರ್ 20ಕ್ಕೆ ಇಂಗ್ಲೆಂಡ್ ವರ್ಸಸ್ ನ್ಯೂಜಿಲೆಂಡ್. ಭಾರತ ವರ್ಸಸ್ ಆಸ್ಟ್ರೇಲಿಯಾ.
ದಕ್ಷಿಣ ಆಫ್ರಿಕಾ ವರ್ಸಸ್ ಪಾಕಿಸ್ತಾನ.ಅಫ್ಘಾನಿಸ್ತಾನ ವರ್ಸಸ್ ವೆಸ್ಟ್ ಇಂಡೀಸ್ ಪಂದ್ಯಗಳು ನಡೆಯಲಿವೆ.