T20-world-cup-2022 | ಟಿ 20 ವಿಶ್ವಕಪ್ ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು ?
ಟಿ 20 ವಿಶ್ವಕಪ್ 2022 ಟೂರ್ನಿಗೆ ಸಂಬಂಧಿಸಿದಂತೆ ಪ್ರೈಜ್ ಮನಿ ಮಾಹಿತಿಯನ್ನು ಐಸಿಸಿ ಪ್ರಕಟಿಸಿದೆ.
ಆಸ್ಟ್ರೇಲಿಯಾ ವೇದಿಕೆಯಾಗಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೂ ಟಿ 20 ವರ್ಲ್ಡ್ ಕಪ್ ನಡೆಯಲಿದೆ.
ಇದರಲ್ಲಿ ಗೆದ್ದ ತಂಡಕ್ಕೆ 1,600,000 ಅಮೆರಿಕನ್ ಡಾಲರ್ಸ್ ( ಭಾರತದ ಕರೆನ್ಸಿಯಲ್ಲಿ 13,05,35,440 ಕೋಟಿ ರೂಪಾಯಿಗಳು ).
ರನ್ನರ್ ಅಪ್ ತಂಡಕ್ಕೆ 800,000 ಅಮೆರಿಕನ್ ಡಾಲರ್ಸ್ ( 6,52,64,280 ಕೋಟಿ ರುಪಾಯಿ) ಸಿಗಲಿದೆ.

ಈ ಬಾರಿಯ ವಿಶ್ವಕಪ್ ನಲ್ಲಿ 16 ತಂಡಗಳು ಭಾಗಿಯಾಗಲಿವೆ. ಇದರಲ್ಲಿ ಆಸ್ಟ್ರೆಲಿಯಾ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಸೌಥ್ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್ ತಂಡಗಳು ನೇರವಾಗಿ ಸೂಪರ್ 12ಕ್ಕೆ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದ ಎಂಟು ತಂಡಗಳು ಕ್ವಾಲಿಫೇಯರ್ ಆಡಲಿವೆ.
ಬಹುಮಾನದ ವಿವರ ಹೀಗಿದೆ.
ಚಾಂಪಿಯನ್ ತಂಡಕ್ಕೆ 13 ಕೋಟಿ ಐದು ಲಕ್ಷ
ರನ್ನರ್ ಅಪ್ ತಂಡಕ್ಕೆ ಆರು ಕೋಟಿ ರೂಪಾಯಿ
ಸೆಮಿ ಫೈನಲ್ ಸೋತ ತಂಡಗಳಿಗೆ 3,26,20,220 ಕೋಟಿ ರುಪಾಯಿ
ಸೂಪರ್ 12 ಹಂತದಲ್ಲಿ ಗೆದ್ದ ತಂಡಗಳಿಗೆ 1,200,000 ಡಾಲರ್ಸ್ ( ಒಂದು ಮ್ಯಾಚ್ ಗೆ 40,000 ಡಾಲರ್ಸ್)
ಸೂಪರ್ 12 ಹಂತದಲ್ಲಿ ಹಿಂದುರುಗಿದ ತಂಗಳಿಗೆ 560,000 ಡಾಲರ್ಸ್ ( 8*70,000 ಡಾಲರ್ಸ್ )
ಫಸ್ಟ್ ರೌಂಡ್ ನಲ್ಲಿ ಗೆದ್ದ ತಂಡಗಳಿಗೆ 480,000 ಡಾಲರ್ಸ್
ಫಸ್ಟ್ ರೌಂಡ್ ನಲ್ಲಿ ಸೋತವರಿಗೆ 160,000 ಡಾಲರ್ಸ್








