T20 World Cup 2022 : ಟಿ 20 ವಿಶ್ವಕಪ್ ಭಾರತ ತಂಡ ಪ್ರಕಟ.. ಯಾವಾಗೆಂದರೆ ?
ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್ ನಲ್ಲಿ ಟಿ 20 ವಿಶ್ವಕಪ್ ನಡೆಯಲಿದ್ದು, ಈ ಮೆಗಾ ಟೂರ್ನಿಗೆ ಸೆಪ್ಟೆಂಬರ್ 15 ರಂದು ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ.
ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಲು ಮುಂಬೈನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಲಿದೆ ಎಂದು ವರದಿಯಾಗಿದೆ.
ಏಷ್ಯಾ ಕಪ್ ನಡೆದ ನಾಲ್ಕು ದಿನಗಳ ನಂತರ ಸೆಲೆಕ್ಟರ್ ಗಳು ಭಾರತ ತಂಡವನ್ನು ಪ್ರಕಟಿಸಲಿದೆ. ಏಷ್ಯಾಕಪ್ ನಲ್ಲಿ ಆಟಗಾರರ ಪ್ರದರ್ಶನದ ಮೇಲೆ ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡಲಿದೆ.
ಏತನ್ಮಧ್ಯೆ, T20 ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಸೆಪ್ಟೆಂಬರ್ 16 ರ ಮೊದಲು ತಮ್ಮ ಸಂಪೂರ್ಣ ವಿವರಗಳನ್ನು ಘೋಷಿಸಲು ICC ಗಡುವು ನಿಗದಿಪಡಿಸಿದೆ.
ವರದಿಗಳ ಪ್ರಕಾರ ಸೆಪ್ಟೆಂಬರ್ 15 ರಂದು ಬಿಸಿಸಿಐ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಈ ಮೆಗಾ ಟೂರ್ನಿಗೆ ಪ್ರತಿ ತಂಡಕ್ಕೆ 15 ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ಕ್ರಿಕೆಟಿಗರು, ನೆಟ್ ಬೌಲರ್‌ಗಳು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಒಟ್ಟು 30 ಜನರು ಪ್ರಯಾಣಿಸಬಹುದು.
ಅಧಿಕೃತವಾಗಿ 15 ಆಟಗಾರರು ಮತ್ತು 8 ಸಹಾಯಕ ಸಿಬ್ಬಂದಿ ಇರಬೇಕು.