T20 world cup 2022 ಆಸೀಸ್ ಜೊತೆ ವಾರ್ಮ್ ಅಪ್ ಮ್ಯಾಚ್… ಗೆಲ್ಲುತ್ತಾ ಟೀಂ ಇಂಡಿಯಾ
ಆಸ್ಟ್ರೇಲಿಯಾದಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಎಲ್ಲರಿಗಿಂತ ಮೊದಲೇ ಅಲ್ಲಿಗೆ ಸೇರಿಕೊಂಡ ಟೀಂ ಇಂಡಿಯಾ ಸ್ಥಳೀಯ ತಂಡಗಳ ವಿರುದ್ಧ ಎರಡು ಪ್ರಾಕ್ಟೀಸ್ ಮ್ಯಾಚ್ ಗಳನ್ನಾಡಿದೆ.
ಈ ಪೈಕಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ಮತ್ತೊಂದು ಪಂದ್ಯದಲ್ಲಿ ಸೋಲುಂಡಿದೆ.
ಇದೀಗ ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ವಾರ್ಮ್ ಅಪ್ ಮ್ಯಾಚ್ ನಡೆಯುತ್ತಿದ್ದು, ಟಾಪ್ ಗೆದ್ದಿರುವ ಆಸೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇದು ವಾರ್ಮ್ ಅಪ್ ಮ್ಯಾಚ್ ಆಗಿದ್ದರೂ ಎರಡು ತಂಡಗಳು ಇದನ್ನ ಗಂಭೀರವಾಗಿ ತೆ್ಗೆದುಕೊಂಡಿವೆ.

ಯಾಕಂದರೇ ಇಲ್ಲಿನ ಪ್ರದರ್ಶನದಿಂದಲೇ ತಂಡಗಳು ವಿಶ್ವಕಪ್ ಗೆ ತಂಡಗಳು ಹೇಗೆ ಸಿದ್ಧತೆ ಮಾಡಿಕೊಂಡಿವೆ ಎಂಬುದು ಗೊತ್ತಾಗುತ್ತದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಆರೋನ್ ಫಿಂಚ್ ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರನ್ ಫಿಂಚ್ (ಸಿ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್ (ವಿಕೆ), ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್
ಭಾರತ (11 ಬ್ಯಾಟಿಂಗ್, 11 ಫೀಲ್ಡಿಂಗ್): ರೋಹಿತ್ ಶರ್ಮಾ(ಸಿ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ಡಬ್ಲ್ಯೂ), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್ , ಮೊಹಮ್ಮದ್ ಶಮಿ, ರಿಷಬ್ ಪಂತ್, ದೀಪಕ್ ಹೂಡಾ