T20 world cup 2022 ಟಿ 20 ವಿಶ್ವಕಪ್ ಸೆಮೀಸ್ ಸೇರುವ ತಂಡಗಳು ಯಾವುವು
ಟಿ 20 ವಿಶ್ವಕಪ್ ಸಮರ ಈಗಾಗಲೇ ಆರಂಭವಾಗಿದ್ದು, ಈ ಬಾರಿ ಸೆಮೀಸ್ ಸೇರುವ ತಂಡಗಳನ್ನು ಕ್ರಿಕೆಟ್ ದೇವರು ಅಂದಾಜಿಸಿದ್ದಾರೆ.
ಸ್ಪೋರ್ಟ್ ಸ್ಟಾರ್ ಜೊತೆ ಮಾತನಾಡಿರುವ ಸಚಿನ್, ಇಂಡಿಯಾ ಚಾಂಪಿಯನ್ ಆಗಬೇಕು ಎಂದು ಕೋರಿಕೊಂಡಿದ್ದಾರೆ.
ನನ್ನ ಪ್ರಕಾರ ಟೀಂ ಇಂಡಿಯಾದ ಜೊತೆಗೆ ಪಾಕಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಟಾಪ್ 4ರಲ್ಲಿ ಉಳಿಯಲಿವೆ.

ಆದ್ರೆ ನ್ಯೂಜಿಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ಕಿವೀಸ್ ಡಾರ್ಕ್ ಹಾರ್ಸ್ ಆಗುವ ಸಾಧ್ಯತೆಗಳಿವೆ.
ಮತ್ತೊಂದು ಕಡೆ ಸೌಥ್ ಆಫ್ರಿಕಾ ತಂಡವನ್ನು ಕೂಡ ಕಡೆಗಣಿಸುವಾಗಿಲ್ಲ ಎಂದಿದ್ದಾರೆ ಸಚಿನ್.
ಕಳೆದ ವಿಶ್ವಕಪ್ ನಲ್ಲಿ ಕನಿಷ್ಠ ಸೆಮಿಫೈನಲ್ ಸೇರದೇ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು.
ಈ ಬಾರಿ ಬಲಿಷ್ಠ ತಂಡದೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಸಮರಕ್ಕೆ ಸಜ್ಜಾಗಿದೆ.
ಭಾರತ ತಂಡ ಮೊದಲ ಪಂದ್ಯದಲ್ಲಿ ಅಕ್ಟೋಬರ್ 23 ರಂದು ಪಾಕಿಸ್ಥಾನ ತಂಡವನ್ನು ಎದುರಿಸಲಿದೆ.








