T20 World Cup 2022 ಚಾಂಪಿಯನ್ಸ್ ವಿಶ್ವಕಪ್ ನಿಂದ ಔಟ್
ಕೆರಿಬಿಯನ್ನರ ವಿರುದ್ಧ ಐರ್ಲೆಂಡ್ ಗೆ ಜಯ
ಸೂಪರ್ 12 ಕ್ಕೆ ಲಗ್ಗೆ ಇಟ್ಟ ಐರ್ಲೆಂಡ್ ತಂಡ
146 ರನ್ ಗುರಿ ನೀಡಿದ್ದ ವೆಸ್ಟ್ ಇಂಡೀಸ್ ತಂಡ
17.3 ಓವರ್ ಗಳಲ್ಲಿ ಗುರಿ ಮುಟ್ಟಿದ ಐರ್ಲೆಂಡ್
ಹೋಬರ್ಟ್ : ಬರೋಬ್ಬರಿ ಎರಡು ಬಾರಿ ಟಿ 20 ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದ ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಮೆಗಾ ಇವೆಂಟ್ ನಿಂದ ಹೊರ ಬಿದ್ದಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್ ತಂಡದ ವಿರುದ್ಧ 9 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಇತ್ತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಐರ್ಲೆಂಡ್ ತಂಡ ಸೂಪರ್ 12ಕ್ಕೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 146 ರನ್ ಗಳಿಸಿತು.
ವಿಂಡೀಸ್ ಪರ ಬ್ರಾಂಡನ್ ಕಿಂಗ್ ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿದರು.
ಕೈಲ್ ಮೇಯರ್ಸ್ 1 ರನ್, ಜಾನ್ಸನ್ ಚಾರ್ಲ್ಸ್ 24 ರನ್, ಎವಿನ್ ಲೆವಿಸ್ 13 ರನ್, ಪೂರನ್ 13 ರನ್ ಗಳಿಸಿದರು.
ವಿಂಡೀಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ 17.3 ಓವರ್ ಗಳಲ್ಲಿ ಗುರಿ ಮುಟ್ಟಿತು.
ಐರ್ಲೆಂಡ್ ಪರ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 23 ಎಸೆತಗಳಲ್ಲಿ 37 ರನ್ ಗಳಿಸಿದರು.
ಪಾಲ್ ಸ್ಟಿರ್ಲಿಂಗ್ 66 ರನ್ ಗಳಿಸಿದ್ರೆ ಲೋರ್ಕನ್ ಟಕರ್ 45 ರನ್ ಗಳಿಸಿದರು.
ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಈ ಬಾರಿಯ ವಿಶ್ವಕಪ್ ನಿಂದ ಹೊರಬಿದ್ದದೆ.








