T20 World Cup | 7 ಟೂರ್ನಿ,6 ಚಾಂಪಿಯನ್ಸ್

1 min read
T20 World Cup saaksh atv

7 ಟೂರ್ನಿ,6 ಚಾಂಪಿಯನ್ಸ್, ಟಿ-20 ವಿಶ್ವಕಪ್ನಲ್ಲಿ ರೋಚಕ ಫೈನಲ್ಸ್..!

ದುಬೈ ಆತಿಥ್ಯ ನೀಡಿದ್ದ ಟಿ20 ವಿಶ್ವಕಪ್ ಮುಗಿದಿದೆ. ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ.

ರಿಂಗ್ ಆಫ್ ಫೈರ್ನಲ್ಲಿ 7ನೇ ಆವೃತ್ತಿಯ ಟಿ20 ವಿಶ್ವಕಪ್ ಆಟಕ್ಕೆ ಅದ್ದೂರಿ ತೆರೆಬಿದ್ದಿದೆ.

ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಹೊಸ ಟಿ20 ಚಾಂಪಿಯನ್ ಆಗಿದೆ.

ಅಂದಹಾಗೇ ಕಳೆದ 7 ಆವೃತ್ತಿಗಳಲ್ಲಿ ಒಟ್ಟು 6 ತಂಡಗಳು ಟಿ20ಯಲ್ಲಿ ಚಾಂಪಿಯನ್ಗಳಾಗಿವೆ.

ವೆಸ್ಟ್ ಇಂಡೀಸ್ ಮಾತ್ರ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

2007 ಟೀಮ್ ಇಂಡಿಯಾ ಚಾಂಪಿಯನ್
ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ್ದೇ ಆಟ. ಧೋನಿ ಹುಡುಗರು ಫೈನಲ್ನಲ್ಲಿ ಕಡುಬದ್ಧ ವೈರಿ ಪಾಕಿಸ್ತಾನ ತಂಡವನ್ನು 5 ರನ್ಗಳಿಂದ ಸೋಲಿಸಿದ್ದರು. ಅಂದು ಟಿ20 ಕ್ರಿಕೆಟ್ನ ಖದರ್ ಬದಲಾಗುವ ಜೊತೆಗೆ ಟೀಮ್ ಇಂಡಿಯಾದ ಅದೃಷ್ಟವೇ ಬದಲಾಗಿ ಬಿಟ್ಟಿತು.

T20 World Cup saaksh atv

2009: ಪಾಕ್ ಚಾಂಪಿಯನ್
ಮೊದಲ ಟಿ20 ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತಿದ್ದ ಪಾಕಿಸ್ತಾನ 2ನೇ ವಿಶ್ವಕಪ್ನಲ್ಲಿ ಅಂದುಕೊಂಡಿದ್ದನ್ನು ಸಾಧಿಸಿ ಚಾಂಪಿಯನ್ ಆಯಿತು. ಇಂಗ್ಲೆಂಡ್ನಲ್ಲಿ ನಡೆದ್ದ ಟೂರ್ನಿಯಲ್ಲಿ ಪಾಕಿಸ್ತಾನ ಪೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತ್ತು.

2010: ಇಂಗ್ಲೆಂಡ್ ಚಾಂಪಿಯನ್
ವೆಸ್ಟ್ಇಂಡೀಸ್ 3ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಆತಿಥ್ಯ ನೀಡಿತ್ತು. ಈ ಬಾರಿ ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೇರಿತ್ತು. ಅಂದು ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಕಪ್ ಎತ್ತಿ ಮೆರೆದಾಡಿತ್ತು.

2012: ಲಂಕಾದಲ್ಲಿ ವಿಂಡೀಸ್ ಚಾಂಪಿಯನ್
2012ರ ಟೂರ್ನಿ ನಡೆದಿದ್ದು ಶ್ರೀಲಂಕಾದಲ್ಲಿ. ಇಲ್ಲಿ ಕೆರಿಬಿಯನ್ನರು ಕಿಂಗ್ಗಳಾದರು. ವೆಸ್ಟ್ ಇಂಡೀಸ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು.

2014: 3ನೇ ಪ್ರಯತದಲ್ಲಿ ಲಂಕಾಗೆ ವಿಶ್ವಕಪ್
ಬಾಂಗ್ಲಾದೇಶ ಈ ಟೂರ್ನಿಗೆ ಆತಿಥ್ಯ ನೀಡಿತ್ತು. 2009 ಮತ್ತು 2012ರಲ್ಲಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದ ಶ್ರೀಲಂಕಾ 3ನೇ ಬಾರಿಯಲ್ಲಿ ಕಪ್ ಎತ್ತಿ ನಲಿದಾಡಿತು. ಲಂಕಾ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿತ್ತು.

2016: ಭಾರತದಲ್ಲಿ ಕೆರಿಬಿಯನ್ನರ ಆಟ
2016ರ ಟೂರ್ನಿಗೆ ಭಾರತ ಆತಿಥ್ಯ ನೀಡಿತ್ತು. ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿ ಮೆರೆದಾಡಿತು. ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಡ್ಯಾನ್ಸ್ ಮಾಡಿತು. ವಿಂಡೀಸ್ 2 ಬಾರಿ ಕಪ್ ಗೆದ್ದ ಏಕೈಕ ತಂಡವೂ ಆಗಿದೆ.

T20 World Cup saaksha tv

2021: ದುಬೈನಲ್ಲಿ ಆಸ್ಟ್ರೇಲಿಯಾದ ಆಟ
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ದುಬೈ ಆತಿಥ್ಯ ನೀಡಿತ್ತು. ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ವಿಂಡೀಸ್ ಹೊರತು ಪಡಿಸಿದರೆ 5 ತಂಡಗಳು ಬೇರೆ ಬೇರೆ ಟೂರ್ನಿಗಳಲ್ಲಿ ಚಾಂಪಿಯನ್ ಆಗಿವೆ ಅನ್ನುವುದು ಟಿ20 ಕ್ರಿಕೆಟ್ನಲ್ಲಿ ಫೈಟ್ ಎಷ್ಟರ ಮಟ್ಟಿಗೆ ಇದೆ ಅನ್ನುವುದಕ್ಕೆ ಸಾಕ್ಷಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd