T20 World Cup | ಟೀಂ ಇಂಡಿಯಾದ ಸಾಂಘೀಕ ಪ್ರದರ್ಶನ : ಆಸ್ಟ್ರೇಲಿಯಾಗೆ ಸೋಲು
ಆಸೀಸ್ ವಿರುದ್ಧದ ಮೊದಲ ವಾರ್ಮ್ ಅಪ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಅರು ರನ್ ಗಳಿಂದ ಗೆಲುವು ಸಾಧಿಸಿದೆ.
ಪಂದ್ಯ ಗೆಲ್ಲಲು 187 ರನ್ ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ, ಟೀಂ ಇಂಡಿಯಾದ ಸಾಂಘೀಕ ಪ್ರದರ್ಶನಕ್ಕೆ ತಲೆಬಾಗಿ 180 ರನ್ ಗಳಿಗೆ ಸರ್ವಪತನಗೊಂಡಿತು.
ಆ ಮೂಲಕ ಟೀಂ ಇಂಡಿಯಾ ಆರು ರನ್ ಗಳಿಂದ ಗೆಲುವಿನ ನಗೆ ಬೀರಿತು.
ಅಂತಿಮ ಓವರ್ ನಲ್ಲಿ ಟೀಂ ಇಂಡಿಯಾದ ಬೌಲರ್ ಮೊಹ್ಮದ್ ಶಮಿ ಬೊಂಬಾಟ್ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದರು. ಇದರ ಪರಿಣಾಮ ಟೀಂ ಇಂಡಿಯಾ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.
ಆಸ್ಟ್ರೇಲಿಯಾ ಪರ ಮಿಚಲ್ ಮಾರ್ಷ್ 35 ರನ್, ಅರೋನ್ ಫಿಂಚ್ 76, ಗ್ಲೇನ್ ಮ್ಯಾಕ್ಸ್ ವೆಲ್ 23 ರನ್ ಗಳಿಸಿದ್ದು, ಬಿಟ್ಟರೇ ಬೇರ್ಯಾರು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಭಾರತದ ಪರ ಮೊಹ್ಮದ್ ಶಮಿ 3, ಭುನವೇಶ್ವರ್ ಕುಮಾರ್ 2, ಅರ್ಷ್ ದೀಪ್, ಹರ್ಷಲ್ ಪಟೇಲ್, ಚಹಾಲ್ ತಲಾ ಒಂದು ವಿಕೆಟ್ ಪಡೆದರು.
ಇನ್ನು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭಿಕರಾದ ರಾಹುಲ್, ರೋಹಿತ್ ಶರ್ಮಾ ಉತ್ತಮ ಅಡಿಪಾಯ ಹಾಕಿದರು.
ರಾಹುಲ್ 33 ಎಸೆತಗಳಲ್ಲಿ 57 ರನ್ ಗಳಿಸಿ ಔಟ್ ಆದ್ರೆ ರೋಹಿತ್ 15 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ವಿರಾಟ್ ಕೊಹ್ಲಿ 19 ರನ್, ದಿನೇಶ್ ಕಾರ್ತಿಕ್ 20 ರನ್ ಗಳಿಗೆ ಆಟ ಮುಗಿಸಿದರು.
ಹಾರ್ದಿಕ್ ಪಾಂಡ್ಯ ಎರಡು ರನ್ ಗಳಿಸಿದ್ರೆ ಅಕ್ಷರ್ ಪಟೇಲ್, ಅಶ್ವಿನ್ ತಲಾ ಆರು ರನ್ ಗಳಿಸಿದರು.
ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ 33 ಎಸೆತಗಳಲ್ಲಿ 50 ರನ್ ಗಳಿಸಿದರು.
ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.