T20 World Cup | ದಕ್ಷಿಣ ಆಫ್ರಿಕಾಕ್ಕೆ ಬಾಂಗ್ಲಾ ಚಾಲೆಂಜ್ 

1 min read
South Africa saaksha tv

T20 World Cup | ದಕ್ಷಿಣ ಆಫ್ರಿಕಾಕ್ಕೆ ಬಾಂಗ್ಲಾ ಚಾಲೆಂಜ್  South Africa saaksha tv

ಒಂದು ರೀತಿಯಲ್ಲಿ ಇದು ಹಾವು ಮತ್ತು ಮುಂಗುಸಿಯ ಆಟದಂತೆ ಇರುವ ಮ್ಯಾಚ್.

ಅತ್ತ ದಕ್ಷಿಣ ಆಫ್ರಿಕಾ ಗ್ರೂಪ್1ರಲ್ಲಿ ಸೆಮಿಫೈನಲ್ಗೇರಬೇಕು ಅನ್ನು ಲೆಕ್ಕಾಚಾರದಲ್ಲಿದ್ದರೆ, ಇತ್ತ ಬಾಂಗ್ಲಾದೇಶ ಹೇಗಿದ್ದರೂ ಗ್ರೂಪ್ ಹಂತದಲ್ಲೇ ಹೊರಹೋಗುವುದು ಗ್ಯಾರೆಂಟಿ.

ಆದರೆ ಹೋಗುತ್ತಾ ಇನ್ನೊಂದು ತಂಡವನ್ನು ಎಳೆದುಕೊಂಡು ಹೋಗೋಣ ಅನ್ನುವ ಛಲದಲ್ಲಿದೆ.

ಹೀಗಾಗಿ ಅಬುದಾಭಿಯಲ್ಲಿ ನಡೆಯುವ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಕುತೂಹಲಕಾರಿಯಾಗಿದೆ.

ದಕ್ಷಿಣ ಆಫ್ರಿಕಾ ಆಡಿರುವ 3 ಪಂದ್ಯಗಳಲ್ಲಿ 2ನ್ನು ಗೆದ್ದು 1ನ್ನು ಸೋತಿದೆ. ಮೂರೂ ಪಂದ್ಯಗಳಲ್ಲೂ ಹರಿಣಗಳ ಬೌಲಿಂಗ್ ಮಿಂಚಿದೆ.

ಆದರೆ ಬ್ಯಾಟಿಂಗ್ ಅಂತಹ ಪ್ರದರ್ಶನ ನೀಡಿಲ್ಲ. ಕ್ವಿಂಟನ್ ಡಿ ಕಾಕ್, ರಿಜಾ ಹೆಂಡ್ರಿಕ್ಸ್, ಏಡಿಯನ್ ಮಾರ್ಕ್ ರಾಂ, ತೆಂಬ ಬವುಮಾ, ಡೇವಿಡ್ ಮಿಲ್ಲರ್ರಂತಹ ಘಟಾನುಘಟಿಗಳಿದ್ದರೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.

South Africa saaksha tv

ಆದರೆ ಬೌಲಿಂಗ್ ಮಾತ್ರ ಸೂಪರ್. ಅನ್ರಿಚ್ ನೋರ್ಟ್ಜೆ, ಕಗಿಸೋ ರಬಾಡಾ ವೇಗ, ಶಂಸಿ ಮತ್ತು ಮಹಾರಾಜನ ಸ್ಪಿನ್ ಜೊತೆಗೆ ಪ್ರಿಟೋರಿಯಸ್ ಡೆತ್ ಬೌಲಿಂಗ್ ತಂಡದ ಕೈ ಹಿಡಿದಿದೆ.

ಬಾಂಗ್ಲಾದೇಶ ಸೂಪರ್ 12 ಹಂತದಲ್ಲಿ ಅಂದುಕೊಂಡಿದ್ದು ಏನೂ ನಡೆದಿಲ್ಲ. ಅತ್ತ ಬ್ಯಾಟಿಂಗ್ನಲ್ಲಿ ವೈಫಲ್ಯ, ಇತ್ತ ಬೌಲಿಂಗ್ನಲ್ಲೂ ಎಡವಟ್ಟು.

ಈಗ ಸ್ಟಾರ್ ಆಲ್ರೌಂಡರ್ ಶಕೀಬ್ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿರುವುದು ಬಾಂಗ್ಲಾ ಟೈಗರ್ಸ್ಗೆ ಶಾಕ್ ನೀಡಿದೆ.

ಬಾಂಗ್ಲಾದೇಶಕ್ಕೆ ಟೂರ್ನಿಯಲ್ಲಿ ಉಳಿದಿರುವುದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಹಣೆ ಬರಹ ಬರೆಯುವ ಕೆಲಸ. ಹೀಗಾಗಿ ಈ ಪಂದ್ಯ ಲೆಕ್ಕಾಚಾರದ ಮಟ್ಟಿಗೆ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd