T20 World Cup: ಇಂಡೋ ಪಾಕ್ ಪಂದ್ಯಕ್ಕೆ ಮಳೆಯ ಸಾಧ್ಯತೆ ಕಡಿಮೆ….
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2022 ರ ಉದ್ಘಾಟನಾ ಪಂದ್ಯ ಅಕ್ಟೋಬರ್ 23 ರಂದು ಭಾನುವಾರ ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಕೆಲ ದಿನಗಳಿಂದ ಮೆಲ್ಬೋರ್ನ್ ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭಾನುವಾರ ನಡೆಯತ್ತಿರುವ ಪಂದ್ಯದಲ್ಲೂ ಮಳೆ ಬೀಳಲಿದೇ ಎಂಬ ಆತಂಕ ಉಂಟಾಗಿತ್ತು. ಆದರೇ ಇದೀಗ ಅಲ್ಲಿನ ಹವಾಮಾನ ವರದಿಯ ಪ್ರಕಾರ ಪಂದ್ಯ ಮಳೆಯ ತೊಂದರೆಯಿಂದ ಹೊರಗುಳಿಯಲಿದೆ ಎನ್ನಲಾಗಿದೆ.
ಇತ್ತೀಚಿನ ಹವಾಮಾನ ವರದಿ ಪ್ರಕಾರ, ಭಾನುವಾರದಂದು ಮಳೆ ಬೀಳುವ ಸಂಭವನೀಯತೆ ಈಗ ಕೇವಲ 20 % ಎನ್ನಲಾಗಿದೆ. ಶನಿವಾರ ಕೂಡ ಮೆಲ್ಬೋರ್ನ್‌ನಲ್ಲಿ ಹವಾಮಾನ ಸ್ಪಷ್ಟವಾಗಿದ್ದು, ಭಾನುವಾರವೂ ಹವಾಮಾನ ಬಹಳ ಸಮಯದವರೆಗೆ ಸ್ಪಷ್ಟವಾಗಿರುವ ಸಾಧ್ಯತೆಯಿದೆ. ಸಂಜೆ ವೇಳೆಗೆ ಮಳೆ ಬೀಳುವ ಸಾಧ್ಯತೆ ಇದ್ದರೂ ಅಷ್ಟರೊಳಗಾಗಿ ಪಂದ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್ 2022 ಪಂದ್ಯದ ಓವರ್ ಕಡಿತಗೊಳಿಸುವ ಕುರಿತು ನಾಯಕ ರೋಹಿತ್ ಶರ್ಮಾ ಕೂಡ ಮಾತನಾಡಿದ್ದಾರೆ ” ಎಲ್ಲರೂ 40 ಓವರ್‌ಗಳ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾರೆ. ಏಕೆಂದರೆ ಎಲ್ಲಾ ಅಭಿಮಾನಿಗಳು 20-20 ಓವರ್‌ಗಳ ಪಂದ್ಯವನ್ನ ವೀಕ್ಷಿಸಲು ಟಿಕೆಟ್‌ಗಳನ್ನು ಖರೀದಿಸುತ್ತಾರೆ, ಆದರೆ ನಾವು ಎಲ್ಲದಕ್ಕೂ ಸಿದ್ದರಿದ್ದವೇವೆ 10-10 ಓವರ್‌ಗಳು ಅಥವಾ ಅದಕ್ಕಿಂತ ಕಡಿಮೆಯಿರಲಿ ನಾವು ಆಡಲು ಬಯಸುತ್ತೇವೆ ಎಂದಿದ್ದಾರೆ.
T20 World Cup: Chance of rain for Indo-Pak match is low….








