ಟಿ-20 ವಿಶ್ವಕಪ್ | ಇಂಡೋ – ಪಾಕ್ ಪಂದ್ಯ : ಗಂಭೀರ್ ಪ್ರತಿಕ್ರಿಯೆ
ನವದೆಹಲಿ : ಐಸಿಸಿ 2021 ಟಿ 20 ವಿಶ್ವಕಪ್ ದಂಗಲ್ ಗೆ ಮುಹೂರ್ತ ಫಿಕ್ಸ್ ಆಗಿದ್ದು, ಭಾರತ ಆರಂಭದಲ್ಲೇ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಇಂದು ಟಿ 20 ವಿಶ್ವಕಪ್ ಟೂರ್ನಿಯ ಪಂದ್ಯಾವಳಿಗಳ ವೇಳಾಪಟ್ಟಿ ರಿಲೀಸ್ ಆಗಿದ್ದು, ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಟಾರ್ ಸ್ಪೋಟ್ರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಟೂರ್ನಮೆಂಟ್ ಆರಂಭಿಕ ಹಂತದಲ್ಲೇ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡುತ್ತಿರುವುದು ತುಂಬಾ ಒಳ್ಳೆಯದು.
ಯಾಕೆಂದರೆ, ಪಾಕಿಸ್ತಾನ ಪಂದ್ಯದ ಬಗ್ಗೆ ನೀವು ಆಲೋಚಿಸುವುದು ತಪ್ಪುತ್ತದೆ ಮತ್ತು ಮುಂದಿನ ಪಂದ್ಯಗಳತ್ತ ಗಮನ ಹರಿಸಲು ಇದು ತಂಡಕ್ಕೆ ನೆರವಾಗಲಿದೆ.
ಇದು ತಂಡಕ್ಕಷ್ಟೇ ಅಲ್ಲದೆ ದೇಶದ ಅಭಿಮಾನಿಗಳಿಗೂ ಟೂರ್ನಮೆಂಟ್ ಮೇಲೆ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಟಿ 20 ಸಮರದಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿದೆ.









