Virat | ಟಿ 20 ವಿಶ್ವಕಪ್ ನ ‘ಕಿಂಗ್’ ವಿರಾಟ್..!
ಜಸ್ಟ್ ಎರಡು ದಿನಗಳ ತಿಂಗಳ ಹಿಂದೆ ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ಫಾರ್ಮ್ ಹಾಟ್ ಟಾಪಿಕ್ ಆಗಿತ್ತು.
ಎಲ್ಲರ ಬಾಯಲ್ಲೂ ವಿರಾಟ್ ಬ್ಯಾಟಿಂಗ್ ಫಾರ್ಮ್ ಬಗ್ಗೆಯೇ ಮಾತು. ಅದರಲ್ಲೂ ಅವರು ಟಿ 20 ವಿಶ್ವಕಪ್ ಗೆ ಆಯ್ಕೆ ಆಗೋದೇ ಡೌಟ್ ಅಂತಾ ಹೇಳಲಾಗುತ್ತಿತ್ತು. ಆದ್ರೆ ಈಗ ಕಿಂಗ್ ಇಸ್ ಬ್ಯಾಕ್..!!
ಹೌದು..! ಇಂಗ್ಲೆಂಡ್ ನೆಲದಲ್ಲಿ ನಡೆದ ಸರಣಿ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡ ಕೊಹ್ಲಿ ಏಷ್ಯಾಕಪ್ ನಲ್ಲಿ ವಿರಾಟರೂಪ ತೋರಿಸಿದ್ರು.
ವಿಂಟೇಜ್ ಕೊಹ್ಲಿಯನ್ನ ನೆನಪಿಸುತ್ತಾ ವಿರಾಟ್ ಸಿಡಿಸಿದ ಸೆಂಚೂರಿ ಎಲ್ಲರ ಬಾಯಿ ಮುಚ್ಚಿಸಿದ್ದು ಮಾತ್ರವಲ್ಲದೇ ಕಿಂಗ್ ಇಸ್ ಬ್ಯಾಕ್ ಅಂತಾ ಸಾರಿ ಹೇಳಿದ್ರು.
ಟಿ 20 ವಿಶ್ವಕಪ್ ತಂಡದಲ್ಲಿ ವಿರಾಟ್ ಗೆ ಸ್ಥಾನ ಸಿಗಲ್ಲ ಎಂದವರೇ ಈಗ ಟೀಂ ಇಂಡಿಯಾ ವಿಶ್ವಕಪ್ ಗೆಲುವು ಕೊಹ್ಲಿ ಮೇಲೆ ನಿಂತಿದೆ ಎನ್ನುತ್ತಿದ್ದಾರೆ.

ಇದು ವಾಸ್ತವ ಕೂಡ. ಯಾಕಂದರೆ ಟಿ 20 ವಿಶ್ವಕಪ್ ನಲ್ಲಿ ವಿರಾಟ್ ಆಟಕ್ಕೆ ಯಾರೂ ಕೂಡ ಸರಿಸಾಟಿಯಲ್ಲ.
ಟಿ 20 ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್ ಘರ್ಜನೆ ಎಂಥಹದ್ದು ಅಂತಾ ಅವರ ದಾಖಲೆಗಳೇ ಸಾರುತ್ತಿವೆ.
ವಿರಾಟ್ ಬರೋಬ್ಬರಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನ್ ಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅಲ್ಲದೇ ಒಟ್ಟಾರೆ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿರುವ ಆಟಗಾರನಾಗಿದ್ದಾರೆ.
2012ರ ವಿಶ್ವಕಪ್ ನಲ್ಲಿ ಐದು ಪಂದ್ಯಗಳಲ್ಲಿ 185 ರನ್, 2014ರ ವಿಶ್ವಕಪ್ ನಲ್ಲಿ ಆರು ಇನ್ನಿಂಗ್ಸ್ ಗಳಲ್ಲಿ 319 ರನ್, 2016ರ ವಿಶ್ವಕಪ್ ನಲ್ಲಿ 5 ಪಂದ್ಯಗಳಲ್ಲಿ 273 ರನ್ ಕಲೆಹಾಕಿದ್ದರು.
ಇದು ಮಾತ್ರವಲ್ಲದೇ ಅರ್ಧಶತಕಗಳ ಲೆಕ್ಕಾಚಾರದಲ್ಲೂ ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟರ್ ಆಗಿದ್ದಾರೆ.
ವಿರಾಟ್ ನಾಲ್ಕು ಟಿ 20 ವಿಶ್ವಕಪ್ ಟೂರ್ನಿಗಳಲ್ಲಿ 10 ಅರ್ಧಶತಕ ದಾಖಲಿಸಿದ್ದಾರೆ.