T20 World Cup | ನ್ಯೂಜಿಲೆಂಡ್ ಗೆ ನಮೀಬಿಯಾ ಸವಾಲು

1 min read

ಕಿವೀಸ್ಗೆ ಸೋಲುಣಿಸುತ್ತಾ ನಮೀಬಿಯಾ..? ಟೀಮ್ ಇಂಡಿಯಾದ ಆಸೆಗೆ ಸಾಥ್ ನೀಡ್ತಾರಾ ಜೈಂಟ್ ಕಿಲ್ಲರ್ಸ್..?

ಟೀಮ್ ಇಂಡಿಯಾ ಸೆಮಿಫೈನಲ್ ಕನಸಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.

ಇನ್ನೊಂದೆಡೆ ನ್ಯೂಜಿಲೆಂಡ್ ಕೂಡ ಕಣಕ್ಕಿಳಿಯುತ್ತಿದೆ. ನಮಿಬಿಯಾ ನ್ಯೂಜಿಲೆಂಡ್ನ ಶಕ್ತಿಗೆ ಹೋಲಿಸಿದರೆ ಏನೂ ಅಲ್ಲ..

ಆದರೂ ಟೀಮ್ ಇಂಡಿಯಾದ ಲೆಕ್ಕಾಚಾರ ಯಶಸ್ವಿ ಆಗಬೇಕಾದರೆ ಜೈಂಟ್ ಕಿಲ್ಲರ್ಸ್ ಮತ್ತೊಂದು ಅಪ್ಸೆಟ್ ಮಾಡಲೇ ಬೇಕಿದೆ.

ಹೀಗಾಗಿ ಶಾರ್ಜಾದಲ್ಲಿ ನಡೆಯುವ ನ್ಯೂಜಿಲೆಂಡ್ ಮತ್ತು ನಮಿಬಿಯಾ ನಡುವಿನ ಪಂದ್ಯ ಟೀಮ್ ಇಂಡಿಯಾ ಆಡುವ ಪಂದ್ಯದಷ್ಟೇ ಮಹತ್ವ ಪಡೆದಿದೆ.

ನ್ಯೂಜಿಲೆಂಡ್ ಬಲಿಷ್ಠ ಅನ್ನುವುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್ನಲ್ಲಿ ಗಪ್ಟಿಲ್ ಮಿಂಚದೇ ಇದ್ದರೂ ಅವರ ಮೇಲೆ ಅನುಮಾನವಿಲ್ಲ.

ಡೆರಿಲ್ ಮಿಚೆಲ್ ಮತ್ತು ಕೇನ್ ವಿಲಿಯಮ್ಸನ್ ರನ್ಗಳಿಸಿದ್ದಾರೆ. ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್ ಮತ್ತು ಜಿಮ್ಮಿ ನಿಶಾನ್ ಬ್ಯಾಟ್ ಆಟ ಶುರುಮಾಡಿದರೆ ನಮಿಬಿಯಾಕ್ಕೆ ಸಂಕಟ ಗ್ಯಾರೆಂಟಿ.

ಬೌಲಿಂಗ್ನಲ್ಲೂ ಕೀವೀಸ್ ಸೂಪರ್. ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ಸ್ವಿಂಗ್ ಮೂಲಕ ಕಾಡಿದರೆ, ಆ್ಯಡಮ್ ಮಿಲ್ನೆ ವೇಗದಿಂದ ಭಯ ಹುಟ್ಟಿಸುತ್ತಾರೆ.

New Zealand saaksha tv

ಮಿಚೆಲ್ ಸ್ಯಾಂಟ್ನರ್ ಮತ್ತು ಈಶ್ ಸೋಧಿ ರನ್ ಕೊಡದೆ ವಿಕೆಟ್ ಕೀಳುತ್ತಿರುವುದು ಕಿವೀಸ್ ಬಲ ಹೆಚ್ಚಿಸಿದೆ.

ನಮಿಬಿಯಾ ತಂಡದಲ್ಲಿ ಹೇಳುವಂತಹ ಆಟಗಾರರಿಲ್ಲ.

ಆದರೆ ಸಾಂಘೀಕ ಆಟದ ಮೂಲಕ ಗಮನ ಸೆಳೆಯಲು ಪ್ಲಾನ್ ಮಾಡಿಕೊಳ್ಳುತ್ತಿದೆ.

ಡೇವಿಡ್ ವೀಸ್ ಒಬ್ಬರೇ ಸ್ಟಾರ್ ಮತ್ತು ಸೂಪರ್ ಸ್ಟಾರ್.

ಹೀಗಾಗಿ ಅವರನ್ನೇ ತಂಡ ಹೆಚ್ಚು ನೆಚ್ಚಿಕೊಂಡಿದೆ.

ಒಟ್ಟಿನಲ್ಲಿ ನ್ಯೂಜಿಲೆಂಡ್ ನಮಬಿಯಾ ವಿರುದ್ಧ ಸೋಲುತ್ತೋ ಬಿಡುತ್ತೋ ಗೊತ್ತಿಲ್ಲಾ, ಆದರೆ ದೊಡ್ಡ ಫೈಟ್ ನೀಡುವುದು ಗ್ಯಾರೆಂಟಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd