t20 world cup | ಸಚಿನ್ ಪ್ರಕಾರ ಈ 4 ತಂಡಗಳಿಗೆ ಸೆಮೀಸ್ ಅವಕಾಶ
ಕಾಂಗರೂಗಳ ನಾಡಿನಲ್ಲಿ ಚುಟುಕು ಮಹಾ ಸಂಗ್ರಾಮ ಶುರುವಾಗಿದೆ. ಅಕ್ಟೋಬರ್ 23 ರಂದು ಇಂಡೋ – ಪಾಕ್ ಕಾಳಗ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ.
ಪ್ರತಿಬಾರಿಯಂತೆ ಈ ಬಾರಿ ಕೂಡ ಟೀಂ ಇಂಡಿಯಾ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆಸ್ಟ್ರೇಲಿಯಾಗೆ ಹೋಗಿದೆ.
ಇತ್ತ ಕ್ರಿಕೆಟ್ ಪಂಡಿತರು ಕೂಡ ಟೀಂ ಇಂಡಿಯಾ ಚಾಂಪಿಯನ್ ಆಗಲಿದೆ ಎಂದು ಹೇಳುತ್ತಿದ್ದಾರೆ.
ಇನ್ನೂ ಸೂಪರ್ 12ರ ಹಂತದ ಮ್ಯಾಚ್ ಗಳು ಶುರುವಾಗಿಲ್ಲ. ಆದ್ರೂ ಹಲವರು ದಿಗ್ಗಜ ಕ್ರಿಕೆಟರ್ಸ್ ಈ ಬಾರಿ ಕಪ್ ಗೆಲ್ಲುವ ಅವಕಾಶಗಳಿರುವ ತಂಡಗಳನ್ನು ಅಂದಾಜಿಸುತ್ತಿದ್ದಾರೆ.
ಅದರಂತೆ ಟೀಂ ಇಂಡಿಯಾದ ದಿಗ್ಗಜ ಸಚಿನ್ ತೆಂಡುಲ್ಕರ್, ಈ ಬಾರಿ ಸೆಮಿ ಫೈನಲ್ ತಲುಪುವ ತಂಡಗಳನ್ನು ಅಂದಾಜಿಸಿದ್ದಾರೆ.
ಸಚಿನ್ ಪ್ರಕಾರ ಟೀಂ ಇಂಡಿಯಾ ಜೊತೆಗೆ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಟಾಪ್ ನಾಲ್ಕರಲ್ಲಿ ಉಳಿಯಲಿವೆಯಂತೆ. ಆದ್ರೆ ಟೀಮ್ ಇಂಡಿಯಾ ಕಪ್ ಗೆಲ್ಲಬೇಕು ಎಂದು ಆಶಿಸಿದ್ದಾರೆ.
ಟೀಂ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ತಂಡಗಳನ್ನು ಫೇವರೇಟ್ ಎಂದಿರುವ ಸಚಿನ್ ತೆಂಡುಲ್ಕರ್, ಸೌಥ್ ಆಫ್ರಿಕಾ, ನ್ಯೂಜಿಲೆಂಡ್ ಗಳನ್ನು ಡಾರ್ಕ್ ಹಾರ್ಸ್ ಎಂದಿದ್ದಾರೆ.

ಈ ತಂಡಗಳು ಯಾವುದೇ ಪರಿಸ್ಥಿತಿಯಲ್ಲಿ ಅಬ್ಬರಿಸಬಹುದು, ಇವುಗಳನ್ನು ಕಡೆಗಣಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ವಿಶ್ವಕಪ್ ನಲ್ಲಿ ಕನಿಷ್ಟ ಸೆಮಿಫೈನಲ್ ಸೇರದೆ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು.
ಹೀಗಾಗಿ ಶತಯಾಗತಾಯ ಕಪ್ ಗೆಲ್ಲುವ ಉದ್ದೇಶದಿಂದ ಹೊಸ ಕೋಚ್, ಹೊಸ ನಾಯಕ ಹೊಸ ತಂಡ ಹೊಸ ಜೋಷ್ ನೊಂದಿಗೆ ಟೀಂ ಇಂಡಿಯಾ ಆಸ್ಟ್ರೆಲಿಯಾದಲ್ಲಿ ಹೆಜ್ಜೆ ಇಟ್ಟಿದೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಆಡಲಿದೆ. ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ದಾಯಾದಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಕಳೆದ ವಿಶ್ವಕಪ್ ನಲ್ಲಿ ಇಂಡೋ – ಪಾಕ್ ತಂಡಗಳು ಮುಖಾಮುಖಿಯಾಗಿದ್ದಾಗ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಸೋಲು ಅನುಭವಿಸಿತ್ತು.
ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ತಯಾರಿ ನಡೆದಿದೆ.
ಇನ್ನು ವಿಶ್ವಕಪ್ ಕಪ್ ಆಯ್ಕೆಯಾದ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ, ಹರ್ಷಲ್ ಪಟೆಲ್, ಅರ್ಷ್ ದೀಪ್ ಸಿಂಗ್, ದೀಪಕ್ ಹೂಡ