ಟೀಮ್ ಇಂಡಿಯಾಕ್ಕೆ ಸ್ಕಾಟ್ಲೆಂಡ್ ಸವಾಲು- ಯಾರಾ ಪಾಲಾಗುತ್ತೆ ದೀಪಾವಳಿ ಧಮಾಕಾ..?
ಅಫ್ಘಾನಿಸ್ತಾನದ ವಿರುದ್ಧದ ಭರ್ಜರಿಯ ದಿಗ್ವಿಜಯ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲನ್ನು ಮರೆ ಮಾಚಿದೆ.
ಆದರೆ ಅಂಕಪಟ್ಟಿಯಲ್ಲಿ ಮಾತ್ರ ಟೀಮ್ ಇಂಡಿಯಾ ಇನ್ನೂ 4ನೇ ಸ್ಥಾನದಲ್ಲೇ ಇದೆ.
ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧ ದುಬೈನಲ್ಲಿ ನಡೆಯುವ ಪಂದ್ಯವನ್ನು ಕೂಡ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲ್ಲಬೇಕಿದೆ.
ಟೀಮ್ ಇಂಡಿಯಾದ ಸಮಸ್ಯೆಗಳಿಗೆ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬಹುತೇಕ ಉತ್ತರ ಸಿಕ್ಕಿದೆ.
ರೋಹಿತ್ ಮತ್ತು ರಾಹುಲ್ ಮಿಂಚಿದರೆ ಉಳಿದವರು ಮಿಂಚುತ್ತಾರೆ ಅನ್ನುವುದು ಸಾಭೀತಾಗಿದೆ.
ಬುಮ್ರಾ, ಶಮಿ ಮತ್ತು ಶಾರ್ದೂಲ್ ಜೊತೆಗೆ ಅಶ್ವಿನ್ ಇದ್ದರೆ ಅನುಭವದ ಲಾಭವಾಗುತ್ತದೆ ಅನ್ನುವುದು ಗೊತ್ತಾಗಿದೆ.
ಹಾರ್ದಿಕ್ ಪಾಂಡ್ಯಾ ಮತ್ತು ರಿಷಬ್ ಪಂತ್ ಫಿನಿಷಿಂಗ್ ಕಾರ್ಯವನ್ನು ಚೆನ್ನಾಗಿ ಮಾಡಿದ್ದಾರೆ.
ವಿರಾಟ್ ಮತ್ತು ಸೂರ್ಯ ಕುಮಾರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅಸಾಧ್ಯ ಅನ್ನಬಹುದು.
ಸ್ಕಾಟ್ಲೆಂಡ್ ತಂಡ ಸೆಮಿಫೈನಲ್ ಆಸೆಯನ್ನು ಕೈಬಿಟ್ಟರೂ ಹೋರಾಟವನ್ನು ಕೈ ಬಿಟ್ಟಿಲ್ಲ.
ನ್ಯೂಜಿಲೆಂಡ್ ವಿರುದ್ಧ ನೀಡಿದ ಹೋರಾಟದ ಬಗ್ಗೆ ಟೀಮ್ ಇಂಡಿಯಾ ಕಣ್ಣಿಟ್ಟಿದೆ.
ಕೈಲ್ ಕೊಯೆಟ್ಜರ್, ಜಾರ್ಜ್ ಮುನ್ಶಿ, ಮ್ಯಾಥ್ಯೂ ಕ್ರಾಸ್ ಮತ್ತು ರಿಚರ್ಡ್ ಬೆರಿಂಗ್ಟನ್ ಮೇಲೆ ಹೆಚ್ಚು ನಂಬಿಕೊಂಡಿದೆ.
ದುಬೈನಲ್ಲಿ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾದ ಪಂದ್ಯ ಸಂಜೆಯ ಪಂದ್ಯ ಆಗಿರುವುದರಿಂದ ಡ್ಯೂ ಫ್ಯಾಕ್ಟರ್ ಮೇಲೆ ಕಣ್ಣಿಡಬೇಕಿದೆ.
ಸ್ಕಾಟ್ಲೆಂಡ್ ಟೀಮ್ ಇಂಡಿಯಾದ ಶಕ್ತಿಗೆ ಹೋಲಿಸಿದರೆ ದುರ್ಬಲ ಅಂತ ಕಾಣಬಹುದು, ಆದರೆ ಟಿ20ಯಲ್ಲಿ ಯಾರ ಶಕ್ತಿಯನ್ನು ಕೂಡ ತಪ್ಪು ತಿಳಿಯುವ ಹಾಗಿಲ್ಲ.
ಸಂಭಾವ್ಯ XI
ಟೀಮ್ ಇಂಡಿಯಾ
1. ಕೆ.ಎಲ್.ರಾಹುಲ್, 2. ರೋಹಿತ್ ಶರ್ಮಾ, 3. ಹಾರ್ದಿಕ್ ಪಾಂಡ್ಯ, 4. ವಿರಾಟ್ ಕೊಹ್ಲಿ, 5. ಸೂರ್ಯಕುಮಾರ್ ಯಾದವ್, 6. ರಿಷಭ್ ಪಂತ್ 7. ರವೀಂದ್ರ ಜಡೇಜಾ, 8.ಶಾರ್ದೂಲ್ ಥಾಕೂರ್, 9. ಮೊಹಮ್ಮದ್ ಶಮಿ, 10. ಜಸ್ ಪ್ರಿತ್ ಬುಮ್ರಾ, 11. ಆರ್. ಅಶ್ವಿನ್
ಸ್ಕಾಟ್ಲೆಂಡ್
1. ಕೈಲ್ ಕೊಯೆಟ್ಜರ್, 2. ಜಾರ್ಜ್ ಮುನ್ಶಿ, 3. ಕಾಲ್ಯೂಮ್ ಮೆಕ್ಲಾಯ್ಡ್, 4. ರಿಚಿ ಬೆರಿಂಗ್ಟನ್, 5. ಮೈಕಲ್ ಲಿಸ್ಕ್, 6. ಮ್ಯಾಥ್ಯೂ ಕ್ರಾಸ್, 7. ಕ್ರಿಸ್ ಗ್ರೀವ್ಸ್, 8. ಮಾರ್ಕ್ ವ್ಯಾಟ್, 9. ಸಾಫ್ಯಾಯನ್ ಶರಿಫ್, 10. ಅಲಸ್ಡರ್ ಇವಾನ್ಸ್, 11. ಬ್ರಾಡ್ ವ್ಹೀಲ್