2021ರ ಮಹತ್ವದ ಕ್ರೀಡಾ ಕೂಟಗಳು.. ಟೋಕಿಯೋ ಒಲಿಂಪಿಕ್ಸ್, ಟಿ-20 ವಿಶ್ವಕಪ್..!
2020 ವರ್ಷ ಇಡೀ ಜಗತ್ತಿಗೆ ಕರಾಳ ವರ್ಷ. ಅದನ್ನು ನೆನಪು ಮಾಡಿಕೊಳ್ಳುವುದು ಬೇಡ. ಎಲ್ಲವನ್ನು ಮರೆತು ಈಗ 2021ರ ವರ್ಷವನ್ನು ಸ್ವಾಗತಿಸೋಣ.
ಕ್ರೀಡಾ ಕ್ಷೇತ್ರದಲ್ಲಿ 2021ರ ವರ್ಷ ಹಲವು ಮಹತ್ವದ ಕ್ರೀಡಾ ಕೂಟಗಳಿಗೆ ಸಾಕ್ಷಿಯಾಗಿದೆ. ಕೋವಿಡ್ ಎರಡನೇ ಅಲೆಯ ನಡುವೆಯೂ ಹಲವು ಕ್ರೀಡಾ ಕೂಟಗಳು ನಡೆಯಲಿವೆ.
ಮುಖ್ಯವಾಗಿ ಟೋಕಿಯೋ ಒಲಿಂಪಿಕ್ಸ್ 2021ರ ಮಹತ್ವದ ಕ್ರೀಡಾಕೂಟವಾಗಲಿದೆ. ಜಪಾನ್ ನಲ್ಲಿ 2020ರಲ್ಲೇ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2021ರಲ್ಲಿ ಆಯೋಜನೆ ಮಾಡಲಾಗುತ್ತಿದೆ. ಕಳೆದ ಕೆಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಮಹತ್ವದ ಸಾಧನೆ ಮಾಡಿದ್ದಾರೆ. ಹೀಗಾಗಿ ಟೋಕಿಯೋ ಒಲಿಂಪಿಕ್ಸ್ ಭಾರತೀಯ ಕ್ರೀಡಾ ಪಟುಗಳಿಗೆ ಭರವಸೆಯ ಬೆಳಗಾಗಿ ಹೊಳೆಯುತ್ತಿದೆ.
ನಂತರ ಈ ಬಾರಿಯ ಐಪಿಎಲ್. ಆದಾದ ನಂತರ ಟಿ-20 ವಿಶ್ವಕಪ್ ಟೂರ್ನಿ. ಬಹುತೇಕ ಭಾರತದಲ್ಲಿ ನಡೆಯುವಂತಹ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಈ ಬಾರಿ ಎರಡು ಮಹತ್ವದ ಕ್ರಿಕೆಟ್ ಟೂರ್ನಿಯನ್ನು ಆಸ್ವಾದಿಸಬಹುದು. ಇನ್ನುಳಿದಂತೆ ಏಕದಿನ, ಟಿ-ಟ್ವೆಂಟಿ ಮತ್ತು ಟೆಸ್ಟ್ ಪಂದ್ಯಗಳೂ ನಡೆಯುತ್ತವೆ.
ಹಾಗೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಟೂರ್ನಿಗಳು ಅಡೆತಡೆ ಇಲ್ಲದೆ ನಡೆಯಲಿದೆ. ಹಾಗೇ ಬ್ಯಾಡ್ಮಿಂಟನ್ ಟೂರ್ನಿಗೂ ಯಾವುದೇ ತೊಂದರೆ ಆಗಲ್ಲ ಅನ್ನೋ ಭರವಸೆ ಇದೆ.
ಇನ್ನುಳಿದಂತೆ ಕಳೆದ ಒಂದು 10 ತಿಂಗಳಿಂದ ಸ್ತಬ್ದವಾಗಿದ್ದ ಕ್ರೀಡಾಜಗತ್ತು ಮತ್ತೆ ಕಲರವ ಮೂಡಿಸಲಿದೆ. 2021ರಲ್ಲಿ ಕ್ರೀಡಾಪಟುಗಳು ಹೊಸ ಭರವಸೆಯೊಂದಿಗೆ ಮಹತ್ತರವಾದ ಸಾಧನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.