T20WorldCup : ಇಂಗ್ಲೆಡ್ ವಿರುದ್ಧ ಸೋತ ಪಾಕಿಸ್ತಾನ ಮಾಡಿದ ಆ ಎಡವಟ್ಟುಗಳೇನು..??
T20WorldCup ವರ್ಲ್ಡ್ ಕಪ್ ಇಂಗ್ಲೆಂಡ್ ಪಾಲಾಗಿದೆ.. ಫೈನಲ್ಸ್ ನಲ್ಲಿ ಪಾಕಿಸ್ತಾನವನ್ನ ಇಂಗ್ಲೆಂಡ್ ಹೀನಾಯವಾಗಿ ಸೋಲಿಸಿತ್ತು..
ಹಾಗೆ ನೋಡಿದ್ರೆ ಪಾಕಿಸ್ತಾನ ಫೈನಲ್ಸ್ ವರೆಗೂ ತಲುಪಿದ್ದೇ ಒಂದು ರೀತಿ ಆಶ್ಚರ್ಯ ಅಂದ್ರೆ ತಪ್ಪಾಗೋದಿಲ್ಲ..
ಪಾಕಿಸ್ತಾನ ಆರಂಭದಿಂದಲೇ ಅಬ್ಬರಿಸುವಲ್ಲಿ ಎಡವಿತ್ತು..
ಅದ್ರಲ್ಲೂ ಪಾಕಿಸ್ತಾನವನ್ನ ಭಾರತ ತಂಡ ಸೋಲಿಸಿದ್ದು , ಆ ಪಂದ್ಯವನ್ನ ಯಾವತ್ತೂ ಮರೆಯೋದಕ್ಕಾಗಲ್ಲ.. ಅದೊಂದು ರೀತಿ ಇತಿಹಾಸದ ಪುಟದಲ್ಲಿ ಉಳಿಯುವಂತಹ ಜಯ..
ಭಾರತ ಸೆಮೀಸ್ ನಲ್ಲಿ ಎಡವಿತ್ತು.. ಇಲ್ಲದೇ ಹೋಗಿದ್ರೆ ಪಾಕಿಸ್ತಾನದ ಜೊತೆಗೆ ಭಾರತ ಸೆಣಸಾಡ ಬೇಕಿತ್ತು…
ಸದ್ಯ ಈಗ ಇಂಗ್ಲೆಂಡ್ ವಿರುದ್ಧ ಪಾಕ್ ಸೋಲೋದಕ್ಕೆ ಕಾರಣಗಳನ್ನ ನೋಡೋದಾದ್ರೆ , ಪಾಕ್ ಗೆ ಉತ್ತಮ ಓಪನಿಂಗ್ ಸಿಗದೇ ಇರುವುದು. ಸೆಮಿಫೈನಲ್ ಪಂದ್ಯವಲ್ಲಿ ಶತಕದ ಜೊತಯತವಾಡಿದ್ದ ರಿಜ್ವಾನ್ ಹಾಗೂ ಬಾಬರ್, ಫೈನಲ್ ಪಂದ್ಯದಲ್ಲಿ ವಿಫಲವಾದರು..
ಇಬ್ಬರು 26 ಎಸೆತಗಳಲ್ಲಿ 29 ರನ್ ಜೊತೆಯಾಟ ಮಾತ್ರ ಆಡಿದರು. 15 ರನ್ ಗಳಿಸಿ ರಿಜ್ವಾನ್ ಔಟಾಗುವ ಮೂಲಕ ಆರಂಭಿಕ ಜೊತೆಯಾಟಕ್ಕೆ ಕೊನೆ ಹಾಡಿದರು.
ನಂತರ ನಾಯಕ ಬಾಬರ್, ಕೂಡ 32 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೊಹಮ್ಮದ್ ಹ್ಯಾರಿಸ್ ಆಟ 8 ರನ್ನಿಗೆ ಅಂತ್ಯವಾಯಿತು.
ಪಾಕ್ 48 ಎಸೆತಗಳಲ್ಲಿ ವೇಸ್ಟ್ ಮಾಡಿತು. ಇದು ತಂಡಕ್ಕೆ ದೊಡ್ಡ ಪೆಟ್ಟು ನೀಡಿತು. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್ ಸಾಕಷ್ಟು ಡಾಟ್ ಬಾಲ್ ಆಡಿದರು. ಇದರಿಂದಾಗಿ ಸ್ಕೋರ್ ಕೂಡ ಕೇವಲ 138 ರನ್ಗಳಿಗೆ ಸೀಮಿತವಾಯಿತು.
ವಿಶ್ವದಲ್ಲೇ ಅತ್ಯುತ್ತಮ ಬೌಲರ್ ಆಗಿರುವ ಶಾಹಿನ್ ಅಫ್ರಿದಿ ಗಾಯದೊಂಡಿದ್ದು, ಪಾಕ್ ಸೋಲಿಗೆ ಮತ್ತೊಂದು ಕಾರಣ ಎನ್ನಬಹುದು.
ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿಯುವ ವೇಳೆ ಶಾಹೀನ್ ಗಾಯಗೊಂಡರು. ಹೀಗಾಗಿ, 2.1 ಓವರ್ಗಳನ್ನು ಮಾತ್ರ ಬೌಲ್ ಮಾಡಿದರು. ನಂತರ ಐದು ಎಸೆತ ಎಸೆದ ಇಫ್ತಿಕಾರ್ 13 ರನ್ ಬಿಟ್ಟುಕೊಟ್ಟರು.