ಮುಂಬೈ: 2008ರ ನವೆಂಬರ್ 26ರಂದು ಉಗ್ರರ ದಾಳಿಗೆ ಗುರಿಯಾಗಿದ್ದ ಮುಂಬೈನ ತಾಜ್ ಹೋಟೆಲ್ಗಳಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿದೆ.
ತಡರಾತ್ರಿ 12.30ಕ್ಕೆ ಮುಂಬೈನ ತಾಜ್ ಕೊಲಬಾ ಮತ್ತು ಬಾಂದ್ರಾದಲ್ಲಿರುವ ತಾಜ್ ಲ್ಯಾಂಡ್ ಎಂಡ್ ಹೋಟೆಲ್ಗಳಿಗೆ ಬೆದರಿಕೆ ಕರೆಗಳು ಮಾಡಲಾಗಿದೆ.
ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಎರಡೂ ಹೋಟೆಲ್ಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ತಾವು ಪಾಕಿಸ್ತಾದಿಂದ ಮಾತನಾಡುತ್ತಿದ್ದು, ಹೋಟೆಲ್ಗಳನ್ನು ಸ್ಫೋಟ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
2008ರಲ್ಲಿ ಮುಂಬೈನಲ್ಲಿ ನಡೆದ ಪಾಕ್ ಉಗ್ರರ ದಾಳಿಗೆ ಸುಮಾರು 166 ಮಂದಿ ಬಲಿಯಾಗಿದ್ದರು.