ಬೆಳದಿಂಗಳಲ್ಲಿ ತಾಜ್ ವೀಕ್ಷಣೆಗೆ ಅವಕಾಶ Taj Mahal saaksha tv
ಆಗ್ರಾ : ಚಂದಿರನ ಬೆಳದಿಂಗಳಲ್ಲಿ ತಾಜ್ ಮಹಲ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಆಗಸ್ಟ್ 21 ರಿಂದ ರಾತ್ರಿ ವೇಳೆ ತಾಜ್ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೋರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 17 2020ರಿಂದ ಸ್ಮಾರಕ ರಾತ್ರಿ ವೀಕ್ಷಣೆಗೆ ನಿಷೇಧ ಏರಲಾಗಿತ್ತು.
ಇದೀಗ ಆಗಸ್ಟ್ 21, 23 ಮತ್ತು 24 ರಂದು ರಾತ್ರಿ 8.30 ರಿಂದ 9. 9 ರಿಂದ 9 30 ಹಾಗೂ 9: 30 ರಿಂದ 10 ಗಂಟೆಯವರೆಗೆ ತಾಜ್ ವೀಕ್ಷಣೆಗೆ ಸಮಯವಕಾಶ ನೀಡಲಾಗಿದೆ.
‘ಪ್ರತಿ ಸ್ಲಾಟ್‍ನಲ್ಲಿ, ಸುಪ್ರೀಂ ಕೋರ್ಟ್‍ನ ಮಾರ್ಗಸೂಚಿಗಳ ಪ್ರಕಾರ 50 ಪ್ರವಾಸಿಗರಿಗೆ ಅವಕಾಶ ನೀಡಲಾಗುವುದು. ಇದಕ್ಕಾಗಿ ಒಂದು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ.