ಬೆಂಗಳೂರು : ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ, ಎರಡು ಬಾರಿ ಎಂಡಿಎಂಎ ಡ್ರಗ್ ತೆಗೆದುಕೊಂಡಿರೋದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಗಿಣಿಗೆ ಗೆಳೆಯ ರವಿಶಂಕರ್ ಎಂಡಿಎಂಎ ಡ್ರಗ್ಸ್ ತಂದುಕೊಟ್ಟಿದ್ದನಂತೆ. ಇದನ್ನು ತುಪ್ಪದ ಹುಡುಗಿ ರಾಗಿಣಿ ಮನೆಯಲ್ಲಿಯೇ ಬಳಕೆ ಮಾಡಿದ್ದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ .
ರಾಗಿಣಿ ಮದ್ಯದ ಜೊತೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಸಿಸಿಬಿ ವಿಚಾರಣೆ ರವಿಶಂಕರ್ ಹೇಳಿಕೆ ಆಧರಿಸಿ ನಟಿಯನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಆಕ್ಟ್ ಸೆಕ್ಷನ್ 21, 21ಸಿ, 27ಬಿ, 27ಎ, 29, ಐಪಿಸಿ 120ಬಿ ಅಡಿ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ 12 ಜನರನ್ನು ಆರೋಪಿಗಳ ಹೆಸರು ಉಲ್ಲೇಖವಾಗಿದೆ. ರಾಗಿಣಿ ದ್ವಿವೇದಿ ಎರಡನೇ ಆರೋಪಿಯ ಸ್ಥಾನದಲ್ಲಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳು: ಶಿವಪ್ರಕಾಶ್ (ಎ1), ರಾಗಿಣಿ ದ್ವಿವೇದಿ (ಎ2), ವೀರೇನ್ ಖನ್ನಾ (ಎ3), ಪ್ರಶಾಂತ್ ರಂಕಾ (ಎ4), ವೈಭವ್ ಜೈನ್ (ಎ5), ಆದಿತ್ಯ ಆಳ್ವಾ (ಎ6), ಲೂಮ್ ಪೆಪ್ಪರ್ (ಎ7), ಪ್ರಶಾಂತ್ ರಿಜು (ಎ8), ಅಶ್ವಿನ್ (ಎ9), ಅಭಿ ಸ್ವಾಮಿ (ಎ10), ರಾಹುಲ್ (ಎ11), ವಿನಯ್ (ಎ12)








