Dhanush : “ದಿ ಗ್ರೇ ಮ್ಯಾನ್” ಟ್ರೈಲರ್ ರಿಲೀಸ್
ಇತ್ತೀಚೆಗಷ್ಟೇ ‘ಮಾರನ್’ ಚಿತ್ರದ ಮೂಲಕ ಮನರಂಜಿಸಿದ ಧನುಷ್ ಹಾಲಿವುಡ್ ಸಿನಿಮಾ ‘ದಿ ಗ್ರೇ ಮ್ಯಾನ್’ನಲ್ಲಿ ನಟಿಸಿರೋದು ಗೊತ್ತಿರುವ ವಿಚಾರವೇ.
ಚಿತ್ರತಂಡ ಮೊನ್ನೆಯಷ್ಟೆ ಧನುಷ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೀಗ ಈ ಚಿತ್ರದ ಟ್ರೈಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.
ಟ್ರೇಲರ್ ಉದ್ದಕ್ಕೂ ಸಾಹಸ ದೃಶ್ಯಗಳು ಹೆಚ್ಚಾಗಿವೆ. ಇದರಲ್ಲಿ ಧನುಷ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಲನಚಿತ್ರವು ಮಾರ್ಕ್ ಗ್ರೆನಿ ಕಾದಂಬರಿ ಆಧಾರಿತವಾಗಿದೆ.
ಚಿತ್ರವನ್ನು ರುಸ್ಸೋ ಬ್ರದರ್ಸ್ (ಜೋ ರುಸ್ಸೋ-ಆಂಟನಿ ರುಸ್ಸೋ) ನಿರ್ದೇಶಿಸಿದ್ದಾರೆ.
ಅವರು ‘ಅವೆಂಜರ್ಸ್: ಇನ್ಫಿನಿಟಿ ವಾರ್’ ಮತ್ತು ‘ಅವೆಂಜರ್ಸ್: ಎಂಡ್ಗೇಮ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು.
ಇದರಲ್ಲಿ ರಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್ ಮತ್ತು ಅನಾ ಡಿ ಅರ್ಮಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವು ಜುಲೈ 15 ರಂದು ಚಿತ್ರಮಂದಿರಗಳಲ್ಲಿ ಮತ್ತು ಜುಲೈ 22 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. Tamil actor dhanush-starrer-hollywood-movie-gray-man-trailer-released