(tamil actor vishal) ತಮಿಳಿನ ಖ್ಯಾತ ನಟ ವಿಶಾಲ್ ಅವರು ಸದ್ಯ ತಮ್ಮ ಚಕ್ರಂ ಸಿನಿಮಾದ ರಿಲೀಸ್ ಗೊಂದಲದಲ್ಲಿದ್ದಾರೆ.. ಇದರ ಬೆನ್ನಲ್ಲೇ ವಿಶಾಲ್ ಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದೆ.
ಈ ಹಿಂದೆ ವಿಶಾಲ್ ನಟಿಸಿದ್ದ ಆಕ್ಷನ್ ಸಿನಿಮಾದ ನಿರ್ಮಾಪಕರು ವಿಶಾಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನಿರ್ಮಾಪಕ ರವೀಂದ್ರನ್ ಅವರ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ನಟ ವಿಶಾಲ್ ಗೆ ( tamil actor vishal) ಶಾಕ್ ನೀಡಿದೆ.
ಟ್ರಿಡೆಂಟ್ ಆರ್ಟ್ಸ್ ಸಂಸ್ಥೆಯಿಂದ ನಿರ್ಮಾಣಗೊಂಡಿದ್ದ ಆಕ್ಷನ್ ಎಂಬ ಸಿನಿಮಾ ನಟ ವಿಶಾಲ್ ಹಾಗೂ ತಮನ್ನಾ ನಟಿಸಿದ್ದರು. ಆದರೆ ಈ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಇದರಿಂದ ನಿರ್ಮಾಪಕರು ಇನ್ನಿಲ್ಲದ ನಷ್ಟ ಅನುಭವಿಸಿದ್ದರು.
‘ದಿಯಾ’ ‘ಲವ್ ಮಾಕ್ಟೇಲ್ ‘ನಲ್ಲಿ ದುರಂತ ಅಂತ್ಯಕಂಡವರು ಒಂದಾಗಿ ಬರುತ್ತಿದ್ದಾರೆ..!
ಹೀಗಾಗಿ ನಿರ್ಮಾಪಕ ರವೀಂದ್ರನ್ ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ನಷ್ಟದ ಬಾಬತ್ತಾಗಿ ಟ್ರಿಡೆಂಟ್ ಸಂಸ್ಥೆಗೆ ವಿಶಾಲ್ 8.25 ಕೋಟಿ ಹಣ ಕೊಡಬೇಕೆಂದು ಕೇಳಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಟ ವಿಶಾಲ್, ನಿರ್ಮಾಪಕರ ರವೀಂದ್ರನ್ ಗೆ 8 ಕೋಟಿ ಹಣ ನೀಡಬೇಕೆಂದು ಸೂಚಿಸಿದೆ. ಅಷ್ಟೇ ಅಲ್ಲದೆ, ಹಣ ನೀಡುವ ವರೆಗೆ ವಿಶಾಲ್ ನಟನೆಯ ಚಕ್ರಂ ಸಿನಿಮಾವನ್ನು ಒಟಿಟಿಯಲ್ಲಿ ಆಗಲಿ ಚಿತ್ರಮಂದಿರಗಳಲ್ಲಿ ಆಗಲಿ ಬಿಡುಗಡೆ ಮಾಡುವಂತಿಲ್ಲ ಎಮದು ಖಡಾಖಂಡಿತವಾಗಿ ಎಚ್ಚರಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








