(diya and love mocktail) ಲಾಕ್ ಡೌನ್ ಆಗುವ ಮುನ್ನ ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಪ್ರೇಕ್ಷಕರ ಮನಗೆದ್ದು ಸಕ್ಸಸ್ ಕಂಡಿದ್ದ ಎರೆಡು ಸಿನಿಮಾಗಳೆಂದ್ರೆ, ಅದು ‘ಲವ್ ಮಾಕ್ ಟೈಲ್ ‘ ಹಾಗೂ ‘ದಿಯಾ’. ಈ ಸಿನೆಮಾಗಳ ಡಬ್ಬಿಂಗ್ ರೈಟ್ಸ್ ಗೂ ಭಾರೀ ಡಿಮ್ಯಾಂಡ್ ಬಂದಿದೆ.
ಪ್ರಾರಂಭದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಗಳು ಕಷ್ಟಪಟ್ಟು ಬಳಿಕ ಕೊನೆಗೂ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಂಡು ಕೊನೆಗೆ ಉತ್ತಮ ಪ್ರದರ್ಶನ ಕಾಣುತ್ತಿದ್ದವು.. ಆದರೆ ಈ ಚಿತ್ರಗಳಿಗೆ ಕೊರೊನಾ ಅಡ್ಡಿಯಾಗಿ ಚಿತ್ರಮಂದಿರಗಳೇ ಬಂದ್ ಆದವು.. ಬಳಿಕ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ತೆರೆ ಕಂಡ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.
ಇದೀಗ ‘ಲವ್ ಮಾಕ್ಟೇಲ್’ ನ ನಿಧಿಮಾ ಮತ್ತು ‘ದಿಯಾ’ ಸಿನಿಮಾದ ಆದಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಹೌದು ನಟ ಪೃಥ್ವಿ ‘ಫಾರ್ ರಿಜಿಸ್ಟ್ರೇಶನ್’ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಪೃಥ್ವಿಗೆ ನಾಯಕಿಯಾಗಿ ನಟಿ ಮಿಲನಾ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. (diya and love mocktail)
ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ನೆನ್ಸೇಷನ್ ಸೃಷ್ಟಿ ಮಾಡಿದ ಈ ಪಾತ್ರಗಳು ಒಂದೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿರೋದಕ್ಕೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ರೊಮ್ಯಾಂಟಿಕ್ ಕಥೆ ಹೊಂದಿರುವ ‘ಫಾರ್ ರಿಜಿಸ್ಟ್ರೇಶನ್’ ಸಿನಿಮಾಗೆ ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಈ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ನವೀನ್ ದ್ವಾರಕನಾಥ್.
ಇತ್ತ ಲವ್ ಮಾಕ್ಟೇಲ್ ಸಕ್ಸಸ್ ಕಂಡ ಹಿನ್ನೆಲೆ ಲವ್ ಮಾಕ್ಟೇಲ್ 2 ಸಹ ತಯಾರಾಗ್ತಿದ್ದು, ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಬ್ಯುಸಿಯಾಗಿದ್ದಾರೆ. ಇತ್ತ ಪೃಥ್ವಿ ಕೈಯಲ್ಲೂ ಸಾಲು ಸಾಲು ಸಿನಿಮಾಗಳಿವೆ.
‘ರಾಬರ್ಟ್’ ನ ಹೊಸ ಪೋಸ್ಟರ್ ರಿಲೀಸ್ : ದಚ್ಚು ಲುಕ್ ಗೆ ಅಭಿಮಾನಿಗಳು ಫಿದಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel