ಪುರಾತನ ವಿಗ್ರಹ ಮಾರಟಕ್ಕೆ ಯತ್ನಿಸಿದ ಬಿಜೆಪಿ ಮುಖಂಡ ಅರೆಸ್ಟ್ …
ರಾಮನಾಥಪುರದಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ತಮಿಳುನಾಡು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮತ್ತು ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಒಟ್ಟು ಏಳು ಹಿಂದೂ ದೇವತೆಗಳ ವಿಗ್ರಹಗಳು ಪತ್ತೆಯಾಗಿವೆ.
ಸ್ಮಾರಕಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿ ಮೇಲೆ, ಐಪಿಎಸ್ ದಿನಕರನ್ ನೇತೃತ್ವದ ಮಧುರೈ ಪೊಲೀಸ್ ಅಧಿಕಾರಿಗಳು ಬಿಜೆಪಿ ಮುಖಂಡ ಅಲೆಕ್ಸಾಂಡರ್ ಅವರನ್ನು ಬಂಧಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಇಬ್ಬರು ಪೊಲೀಸರು ತನಗೆ ನೀಡಿದ ಏಳು ಹಿಂದೂ ವಿಗ್ರಹ ಹೊಂದಿರುವುದಾಗಿ ಅಲೆಕ್ಸಾಂಡರ್ ಒಪ್ಪಿಕೊಂಡಿದ್ದಾನೆ. ಅಲೆಕ್ಸಾಂಡರ್‌ನಿಂದ ಕಾಳಿ ವಿಗ್ರಹ, ಮುರುಗನ್ ವಿಗ್ರಹ, ವಿನಾಯಕನ ವಿಗ್ರಹ, ಎರಡು ನಟರಾಜರ ವಿಗ್ರಹಗಳು ಮತ್ತು ಎರಡು ನಾಗಕನ್ನಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಾಲಯದ ಹಿಂದಿನ ಕಾಲುವೆಯಿಂದ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಸೇಲಂನ ಎಡಪಾಡಿ ಎಂಬಲ್ಲಿ ಗ್ಯಾಂಗ್‌ನಿಂದ ಅರುಪ್ಪುಕೊಟ್ಟೈ ಪೊಲೀಸ್ ಅಧಿಕಾರಿ ಇಳಂಕುರನ್ ಮತ್ತು ದಿಂಡಿಗಲ್‌ನ ಪೊಲೀಸ್ ಅಧಿಕಾರಿ ನಾಗೇಂದ್ರನ್ ಸೇರಿ ಇಬ್ಬರು ಸೇರಿ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಂತರ ಅವರು 5 ಕೋಟಿ ರೂ.ಗೆ ವಿಗ್ರಹಗಳನ್ನ ಮಾರಾಟ ಮಾಡಲು ಅಲೆಕ್ಸಾಂಡರ್ ಅವರನ್ನು ಸಂಪರ್ಕಿಸಿದರು.
ಹೆಚ್ಚಿನ ತನಿಖೆ ನಡೆಯುತ್ತಿದೆ.








