ಹೆಚ್ಚುವರಿ ಕಾವೇರಿ ನೀರಿನ ಮೇಲೆ ತಮಿಳುನಾಡು ಕಣ್ಣು : ಸಿಎಂ ಹೇಳಿದ್ದೇನು..?
ಬೆಂಗಳೂರು : ಹೆಚ್ಚುವರಿ ಕಾವೇರಿ ನೀರಿನ ಮೇಲೆ ತಮಿಳುನಾಡು ಕಣ್ಣಿಟ್ಟಿದ್ದು, ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ `ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಅವರು ಹೇಳಿಕೆ ಕೊಡೋದ್ರಿಂದ ಯಾವುದೇ ಉಪಯೋಗ ಇಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ನೀರು ಬಿಡುಗಡೆಗೆ ಅವಕಾಶ ಇಲ್ಲ. ಅವರು ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ.
ಯಾವ ಕಾರಣಕ್ಕೂ ಮತ್ತೊಮ್ಮೆ ತಗೊಳ್ಳೋದು, ಕೊಡೋದಕ್ಕೆ ಅವಕಾಶ ಇಲ್ಲ. ಈ ಸಂಬಂಧ ಬಿಗಿ ಕ್ರಮವನ್ನು ಕೈಗೊಳ್ತೇವೆ ಎಂದು ಹೇಳಿದರು.
ಇದೇ ವೇಳೆ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಇವತ್ತು ಪಂಚಮಸಾಲಿ ಸಮಾಜದ ಸಚಿವರು ಸುದ್ದಿಗೋಷ್ಟಿ ನಡೆಸ್ತಿದ್ದಾರೆ.
ಎಲ್ಲ ಪ್ರಶ್ನೆಗಳಿಗೂ ಸಚಿವರೇ ಉತ್ತರ ಕೊಡ್ತಾರೆ ಎಂದು ತಿಳಿಸಿದರು. ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಇವತ್ತು ಎಲ್ಲ ಇಲಾಖೆಗಳ ಸಭೆ ಮುಗಿಯುತ್ತೆ. ನಾಳೆ ಬಜೆಟ್ ಸಿದ್ಧತಾ ಸಭೆ ನಡೆಸ್ತೇವೆ.
ಬೇರೆ ಬೇರೆ ಪ್ರಮುಖರ ಜೊತೆ ನಾಳೆ ಸಂಜೆವರೆಗೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
