ಹೆತ್ತ ಅಮನಿಗೆ 15 ದಿನಗಳಿಂದ ಊಟ ನೀರು ನೀಡದೇ ಶೌಚಗೃಹದಲ್ಲಿ ಬಂಧಿಸಿಟ್ಟಿದ್ದ ಪಾಪಿ ಪುತ್ರ
ತಮಿಳುನಾಡು: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಪಾಪಿ ಮಗನೊಬ್ಬ ತನ್ನ ಹೆತ್ತ ಅಮ್ಮನನ್ನ (95) 15 ದಿನಗಳಿಂದ ಅನ್ನ ನೀರು ನೀಡದೆ ಶೌಚಗೃಹದಲ್ಲಿ ಬಂಧಿಸಿ ಕ್ರೌರ್ಯ ಮೆರೆದಿದ್ದಾನೆ.
ವೃದ್ಧೆಯ ನರಳಾಟ ಗಮನಿಸಿದ ನೆರೆಯೊರೆಯವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು, ವೃದ್ಧೆಯನ್ನು ಅಧಿಕಾರಿಗಳು ಭಾನುವಾರ ರಕ್ಷಿಸಿದ್ದಾರೆ. 4 ಮಕ್ಕಳ ತಾಯಿಯಾಗಿರುವ 95 ವರ್ಷದ ರಾಧಾ ಈ ರೀತಿ ಚಿತ್ರ ಹಿಂಸೆಗೆ ಗಹುರಿಯಾಗಿದ್ದ ವೃದ್ಧೆಯಾಗಿದ್ದಾರೆ.
ಸದ್ಯ ಇವರನ್ನ ರಕ್ಷಣೆ ಮಾಡಿ ಸರ್ಕಾರೇತರ ಸಂಸ್ಥೆಯ ವೃದ್ಧಾಶ್ರಮಕ್ಕೆ ಕರೆದೊಯ್ದಿದ್ದು, ಅಲ್ಲಿ ಆಕೆಗೆ ಚಿಕಿತ್ಸೆ ನೀಡಿ, ಆಹಾರ ಕೊಡಲಾಗುತ್ತಿದೆ ಎಂದು ವರದಿಯಾಗಿದೆ.
ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಬಲವಂತವಾಗಿ ಬೀಗ ಹಾಕಲಾಗಿತ್ತು. ಇದ್ರಿಂದಾಗಿ ಆಕೆ ತೀವ್ರ ಅಸ್ವಸ್ಥಗೊಂಡಿದ್ದರು. ಆಕೆ ಸಣ್ಣ ಶೌಚಾಲಯದಲ್ಲಿ ಬಂಧಿಯಾಗಿ ಅಲ್ಲಿ ಹರಿಯುವ ನೀರನ್ನೇ ಕುಡಿದುಕೊಂಡು ಜೀವ ಉಳಿಸಿಕೊಂಡಿದ್ದಾಗಿ ವರದಿಯಾಗಿದೆ.
ಈ ವೃದ್ಧೆ ತನ್ನ ದಿವಂಗತ ಪತಿಯ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರು. ಪಿಂಚಣಿ ಹಣವನ್ನೂ ಈಕೆಯ ಕಿರಿಯ ಮಗ ನೀಡದೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.. ಅಲ್ಲದೇ ಮಗನ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.