tarun gogoi
ಅಸ್ಸಾಂ ಮಾಜಿ ಸಿಎಂ ತರುಣ್ ಗೊಗೊಯ್ ಇನ್ನಿಲ್ಲ: ಕೊರೊನಾ ಸೊಂಕಿಗೆ ಬಲಿ
ಅಸ್ಸಾಂ ಮಾಜಿ ಮುಖ್ಯಮಂತ್ರಿಗಳಾದ ತರುಣ್ ಗೊಗೊಯ್ ಅವರು ವಿಧಿವಶರಾಗಿದ್ದಾರೆ. 84 ವರ್ಷದ ಅವರಿಗೆ ಆಗಸ್ಟ್ 25ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಇಕಿತ್ಸೆಗೆ ಒಳಗಾಗಿದ್ರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಗುವಾಹಟಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸರಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಳೆದರೂ ಚಿಕಿತ್ಸೆ ಫಲಿಸಲಿಲ್ಲ. ಸದ್ಯ ಅವರ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
2001 -2016ರವರೆಗೂ ಬರೋಬ್ಬರಿ ಮೂರು ಬಾರಿಗೆ ಅಸ್ಸಾಂ ಮುಖ್ಯಮಂತ್ರಿ ಆಗಿ ಗೊಗೊಯ್ ಆಡಳಿತ ನಡೆಎಸಿದ್ದಾರೆ. ಮೂರು ಬಾರಿಗೆ ಕಾಂಗ್ರೆಸ್ ನಿಂದ ಗೆದ್ದು ಸಿಎಂ ಆಗಿದ್ದವರು ಗೊಗೊಯ್.
ಬಿಜೆಪಿಯಿಂದ ಸಮಾಜ ಒಡೆಯುವ ಕೆಲಸ: ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ
tarun gogoi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel