ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ನೆಕ್ಸಸ್ ಎಲೆಕ್ಟ್ರಿಕಲ್ ಕಾರು – ತನಿಖೆಗೆ ಆದೇಶ
ಎರಡು ತಿಂಗಳ ಹಿಂದೆಯಷ್ಟೆ ಖರೀದಿಸಿದ್ದ ನೂತನ ಟಾಟಾ ನೆಕ್ಸಸ್ ಎಲೆಕ್ಟ್ರಿಕಲ್ ಕಾರಿಗೆ ಇದ್ದಕ್ಕಿಂದ್ದಂತೆ ಬೆಂಕಿ ತಗುಲಿದ್ದು ಕಾರು ಹೊತ್ತಿ ಉರಿದಿರಿರುವ ಘಟನೆ ಮುಂಬೈದಲ್ಲಿ ನಡೆದಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.
ದೇಶದಲ್ಲೇ ಅಂತ್ಯಂತ ಹೆಚ್ಚಿನ ಬೇಡಿಕೆ ಹೊಂದಿರುವ ಎಸ್ ಯು ವಿ ಮಾದರಿಯ ಎಲೆಕ್ಟ್ರಿಕಲ್ ಕಾರಿಗೆ ಬೆಂಕಿ ತಗುಲಿರುವುದನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಟಾಟಾ ಮೋಟಾರ್ಸ್ ಮತ್ತು ಸರ್ಕಾರಗಳು ಬೆಂಕಿ ತಗುಲಿದ್ದಕ್ಕೆ ಕಾರಣದ ಕುರಿತು ತನಿಖೆ ನಡೆಸಲಿವೆ.
‘ನಾವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಯಾವುದೇ ಮಾಹಿತಿ ಹೊರಬಂದರೂ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು. ನಮ್ಮ ವಾಹನಗಳು ಮತ್ತು ಅವುಗಳ ಬಳಕೆದಾರರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ. ಸುಮಾರು 4 ವರ್ಷಗಳಲ್ಲಿ 30,000 ಕ್ಕೂ ಹೆಚ್ಚು EVಗಳು ದೇಶಾದ್ಯಂತ ಒಟ್ಟು 100 ಮಿಲಿಯನ್ ಕಿಲೋಮೀಟರ್ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ, ಇದು ಈ ರೀತಿಯ ಮೊದಲ ಘಟನೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಟಾಟಾ ನೆಕ್ಸಾನ್ ಇವಿ ಕಾರಿನ ಬಗ್ಗೆ ಹೇಳುವುದಾದರೆ… ಇದು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಎಲೆಕ್ಟ್ರಿಕ್ ಕಾರ್ 30.2kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಪೂರ್ಣ ಚಾರ್ಜ್ ಮಾಡಿದರೆ, ಈ ಕಾರು 312 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಬಳಸಿ ಕಾರನ್ನು ಕೇವಲ 60 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಸಾಮಾನ್ಯ ಚಾರ್ಜರ್ ಮೂಲಕ 8 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.