ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತವಾಂಗ್… ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..! ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

Namratha Rao by Namratha Rao
June 25, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ತವಾಂಗ್… ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..! ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

ಅರುಣಾಚಲ ಪ್ರದೇಶ.. ತನ್ನಲ್ಲಿ ಸಾಕಷ್ಟು ಪ್ರಾಕೃತಿಕ ಸಂಪತ್ತನ್ನಿರಿಸಿಕೊಂಡ ಭಾರತದ ರಾಜ್ಯಗಳಲ್ಲಿ ಒಂದು. ಅದರಲ್ಲೂ ಇಲ್ಲಿನ ತವಾಂಗ್ ವ್ಯಾಲಿ ಹೆಚ್ಚೆಚ್ಚು ಸುದ್ದಿಯಲ್ಲಿರುವ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ ಎತ್ತರದಲ್ಲಿದೆ. ಅಷ್ಟೆ ಅಲ್ಲ, ಎರಡು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಟಿಬೆಟ್ ಮತ್ತು ನೈರುತ್ಯದಲ್ಲಿ ಭೂತಾನ್ ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡ ತವಾಂಗ್ ಗೆ ಭೇಟಿ ನೀಡಿದಾಗ ಪ್ರವಾಸಿಗರು ಅವರ್ಣನೀಯ ಅನುಭವಕ್ಕೆ ಒಳಗಾಗುತ್ತಾರೆ.

Related posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

April 13, 2026
ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

April 13, 2026

ತವಾಂಗ್ ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?

ತವಾಂಗ್ ಗೆ ಈ ಹೆಸರು ಬರಲು ಕಾರಣ ಅಲ್ಲಿನ ಮಠಗಳು. ತವಾಂಗ್ ನಗರದ ನಗರದ ಪಶ್ಚಿಮದ ಅಂಚಿನುದ್ದಕ್ಕೂ ನಿರ್ಮಿಸಲಾಗಿದ್ದ ತವಾಂಗ್ ಮಠಗಳಿಂದಲೇ ಈ ನಗರಕ್ಕೆ ತವಾಂಗ್ ಎಂಬ ಹೆಸರು ಬಂದಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳು , ಶಿಖರಗಳು ಮತ್ತು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ತವಾಂಗ್ ಐತಿಹಾಸಿಕವಾಗಿ ಟಿಬೆಟ್‌ನ ಭಾಗವಾಗಿತ್ತು, ಇದರಲ್ಲಿ ಮೊನ್ಪಾ ಜನರು ವಾಸಿಸುತ್ತಿದ್ದರು . ತವಾಂಗ್ ಮಠವನ್ನು ಮೆರಾಕ್ ಲಾಮಾ ಲೋಡ್ರೆ ಗಯಾಟ್ಸೊ ಅವರು 1681 ರಲ್ಲಿ 5 ನೇ ದಲೈ ಲಾಮಾ, ನ್ಗಾವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಗಳಿಗೆ ಅನುಗುಣವಾಗಿ ಸ್ಥಾಪಿಸಿದರು ಎನ್ನಲಾಗುತ್ತದೆ.

ಮೌಂಟ್ ಅಬು – ಇದು ಮರುಭೂಮಿಯ ಒಯಾಸಿಸ್..! ರಾಜಸ್ಥಾನದ ಏಕೈಕ ಗಿರಿಧಾಮ..!

ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..!

ತವಾಂಗ್ನಲ್ಲಿರುವ ಬೌದ್ಧ ಮಠಗಳು ಎಲ್ಲೆಡೆ ಪ್ರಸಿದ್ಧಿ ಹೊಂದಿದೆ. ಅದರಲ್ಲೂ ಇಲ್ಲಿನ ತವಾಂಗ್ ಮಠಕ್ಕೆ ಭೇಟಿ ನೀಡಲು ಹಲವರು ಆಗಮಿಸುತ್ತಾರೆ. ತವಾಂಗ್ ಮಠವನ್ನು ಮೇರಾ ಲಾಮಾ ಲೋಡ್ರೆ ಗಯಾಟ್ಸೊ 5 ನೇ ದಲೈ ಲಾಮಾ , ನಾಗ್ವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಿದರು . ಇದು ಗೆಲುಗ್ಪಾ ಪಂಥಕ್ಕೆ ಸೇರಿದ್ದು, ಭಾರತದ ಅತಿದೊಡ್ಡ ಬೌದ್ಧ ಮಠವಾಗಿದೆ.ಇದು ಟಿಬೆಟಿಯನ್ ಬೌದ್ಧರಿಗೆ ಪ್ರಮುಖ ಪವಿತ್ರ ತಾಣವಾಗಿದ್ದು, ಇದು ಆರನೇ ದಲೈ ಲಾಮಾ ಅವರ ಜನ್ಮಸ್ಥಳ.

ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

ತವಾಂಗ್ ಸೇರಿದಂತೆ ಅರುಣಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ಬಳಸುವ ಮರದ ಪಾತ್ರೆಗಳು ಆಕರ್ಷಕವಾಗಿರುತ್ತವೆ. ಡೊಲೊಂ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಮುಚ್ಚಳವಿರುವ ಮರದ ಬೌಲ್. ಇದನ್ನು ಊಟ ಮಾಡಲು ಬಳಸುತ್ತಾರೆ. ಶೆಂಗ್ ಖ್ಲೆಂ ಎಂದರೆ ಮರದಿಂದ ಮಾಡಿದ ಚಮಚ. ಗ್ರುಕ್, ಇದು ಚಹಾ ಸೇವನೆಗೆ ಬಳಸಲಾಗುವ ಮರದ ಕಪ್.

ಇನ್ನು ಇಲ್ಲಿನ‌ ತವಾಂಗ್ ಯುದ್ಧ ಸ್ಮಾರಕವನ್ನು ನೋಡಲೇಬೇಕು. 1962 ಇಂಡೋ – ಚೀನಾ ಯುದ್ಧದ ಸಮಯದಲ್ಲಿ ಭಾರತದ ರಕ್ಷಣೆಗೆ ತಮ್ಮ ಪರಮೋಚ್ಚ ತ್ಯಾಗ ನೀಡಿದ ಹುತಾತ್ಮರ ಗೌರವಾರ್ಥ ಕಟ್ಟಲಾಗಿದೆ . ಈ ಸ್ಮಾರಕ ಯುದ್ಧಘಟನೆಗಳು ಮತ್ತು ತಮ್ಮ ಜೀವವನ್ನು ತ್ಯಾಗ ಮಾಡಿದ ಸೈನಿಕರ ಪಟ್ಟಿಗಳನ್ನು ಒಳಗೊಂಡಿದೆ.

ಈ ಪ್ರಪಂಚದ ನಕಲಿ ದೇಶ… ಇವರು ತಿನ್ನದೇ ಇರುವ ಜೀವಿ ಇಲ್ಲ.. ಕಾಪಿ ಮಾಡೋದ್ರಲ್ಲಿ ಈ ದೇಶ ಎಕ್ಸ್ ಪರ್ಟ್..!

ಜಾತ್ರೆಗಳು ಮತ್ತು ಉತ್ಸವಗಳು ಅರುಣಾಚಲ ಪ್ರದೇಶದ ಬುಡಕಟ್ಟು ಜನರ ಜೀವನದ ಅವಿಭಾಜ್ಯ ಅಂಗ. ತವಾಂಗ್ ನಲ್ಲಿರುವ ಮೊನ್ಪ ಜನಾಂಗವೂ ಇದಕ್ಕೆ ಹೊರತಲ್ಲ. ಮೊನ್ಪ ಜನಾಂಗದ ಉತ್ಸವಗಳೂ ಕೂಡ ಹೆಚ್ಚಾಗಿ ಕೃಷಿ ಮತ್ತು ಧರ್ಮಕ್ಕೆ ಸಂಬಂಧಿಸಿರುತ್ತವೆ. ಪ್ರತಿ ವರ್ಷ ಮೊನ್ಪ ಜನಾಂಗದವರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು, ಲೊಸಾರ್ ಉತ್ಸವ. ಇದು ಹೊಸ ವರ್ಷದ ಹಬ್ಬವಾಗಿದ್ದು, ಫೆಬ್ರುವರಿಯ ಕೊನೆಯ ವಾರ ಮತ್ತು ಮಾರ್ಚದ ಮೊದಲ ವಾರದಲ್ಲಿ ಇದನ್ನು ಭಕ್ತಿಪೂರ್ವಕವಾಗಿ, ವಿಜೃಂಭಣೆಯಿಂದ ಆಚರಿಸುವರು.

ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಅಸ್ಸಾಂನ ಗೌಹಾತಿ ಮತ್ತು ತೇಜ್ಪುರ್ ಮೂಲಕ ದೇಶದ ಇತರ ಭಾಗಗಳಿಂದ ತವಾಂಗ್ ತಲುಪಬಹುದು .

ಚೀನಾದ ರೇನ್‌ಬೋ ಪರ್ವತಗಳು ವಿಶ್ವದ ಭೌಗೋಳಿಕ ಅದ್ಭುತ, ಈ ಬೆಟ್ಟಗಳು ರೂಪುಗೊಂಡಿದ್ದು ಹೇಗೆ ಗೊತ್ತಾ?

ಗುಲಾಬಿ‌ ಸರೋವರ..! ಪಿಂಕ್ ಲೇಕ್ ಹೆಸರಿನ ಹಿಂದಿನ‌ ಇತಿಹಾಸ ಗೊತ್ತಾ..?

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

ಈ ನಗರಕ್ಕಿದೆ ಭವ್ಯ ಇತಿಹಾಸ..! ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಎಂಥವರೂ ಮಾರಿ ಹೋಗದೇ ಇರಲ್ಲ..!

Tags: arunachalapradeshtaavangtourism
ShareTweetSendShare
Join us on:

Related Posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

by Shwetha
April 13, 2026
0

ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ...

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

by Shwetha
April 13, 2026
0

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಫ್ರೀಡಂ ಪಾರ್ಕ್ ಇಂದು ಮೂಕ ಪ್ರಾಣಿಗಳ ಪರವಾಗಿ ಮೊಳಗಿದ ಆಕ್ರೋಶದ ಧ್ವನಿಗೆ ಸಾಕ್ಷಿಯಾಯಿತು. ಕಗ್ಗದಾಸಪುರದ ಡಿಆರ್ ಡಿಒ ಸಂಕೀರ್ಣದಲ್ಲಿ ನಡೆದ ಬೀದಿ ನಾಯಿಗಳ...

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

by Shwetha
April 13, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚುನಾವಣಾ ಕಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯಕ್ಕೆ ಕುಮ್ಮಕ್ಕು ನೀಡಿದ...

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

by Shwetha
April 13, 2026
0

ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನದ ಸ್ಫೋಟ ಸಂಭವಿಸಿದೆ. ಟಿಕೆಟ್ ವಂಚಿತರಾದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram