ತವಾಂಗ್… ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..! ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!
ಅರುಣಾಚಲ ಪ್ರದೇಶ.. ತನ್ನಲ್ಲಿ ಸಾಕಷ್ಟು ಪ್ರಾಕೃತಿಕ ಸಂಪತ್ತನ್ನಿರಿಸಿಕೊಂಡ ಭಾರತದ ರಾಜ್ಯಗಳಲ್ಲಿ ಒಂದು. ಅದರಲ್ಲೂ ಇಲ್ಲಿನ ತವಾಂಗ್ ವ್ಯಾಲಿ ಹೆಚ್ಚೆಚ್ಚು ಸುದ್ದಿಯಲ್ಲಿರುವ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ ಎತ್ತರದಲ್ಲಿದೆ. ಅಷ್ಟೆ ಅಲ್ಲ, ಎರಡು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಟಿಬೆಟ್ ಮತ್ತು ನೈರುತ್ಯದಲ್ಲಿ ಭೂತಾನ್ ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡ ತವಾಂಗ್ ಗೆ ಭೇಟಿ ನೀಡಿದಾಗ ಪ್ರವಾಸಿಗರು ಅವರ್ಣನೀಯ ಅನುಭವಕ್ಕೆ ಒಳಗಾಗುತ್ತಾರೆ.
ತವಾಂಗ್ ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?
ತವಾಂಗ್ ಗೆ ಈ ಹೆಸರು ಬರಲು ಕಾರಣ ಅಲ್ಲಿನ ಮಠಗಳು. ತವಾಂಗ್ ನಗರದ ನಗರದ ಪಶ್ಚಿಮದ ಅಂಚಿನುದ್ದಕ್ಕೂ ನಿರ್ಮಿಸಲಾಗಿದ್ದ ತವಾಂಗ್ ಮಠಗಳಿಂದಲೇ ಈ ನಗರಕ್ಕೆ ತವಾಂಗ್ ಎಂಬ ಹೆಸರು ಬಂದಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳು , ಶಿಖರಗಳು ಮತ್ತು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ತವಾಂಗ್ ಐತಿಹಾಸಿಕವಾಗಿ ಟಿಬೆಟ್‌ನ ಭಾಗವಾಗಿತ್ತು, ಇದರಲ್ಲಿ ಮೊನ್ಪಾ ಜನರು ವಾಸಿಸುತ್ತಿದ್ದರು . ತವಾಂಗ್ ಮಠವನ್ನು ಮೆರಾಕ್ ಲಾಮಾ ಲೋಡ್ರೆ ಗಯಾಟ್ಸೊ ಅವರು 1681 ರಲ್ಲಿ 5 ನೇ ದಲೈ ಲಾಮಾ, ನ್ಗಾವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಗಳಿಗೆ ಅನುಗುಣವಾಗಿ ಸ್ಥಾಪಿಸಿದರು ಎನ್ನಲಾಗುತ್ತದೆ.
ಮೌಂಟ್ ಅಬು – ಇದು ಮರುಭೂಮಿಯ ಒಯಾಸಿಸ್..! ರಾಜಸ್ಥಾನದ ಏಕೈಕ ಗಿರಿಧಾಮ..!
ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..!
ತವಾಂಗ್ನಲ್ಲಿರುವ ಬೌದ್ಧ ಮಠಗಳು ಎಲ್ಲೆಡೆ ಪ್ರಸಿದ್ಧಿ ಹೊಂದಿದೆ. ಅದರಲ್ಲೂ ಇಲ್ಲಿನ ತವಾಂಗ್ ಮಠಕ್ಕೆ ಭೇಟಿ ನೀಡಲು ಹಲವರು ಆಗಮಿಸುತ್ತಾರೆ. ತವಾಂಗ್ ಮಠವನ್ನು ಮೇರಾ ಲಾಮಾ ಲೋಡ್ರೆ ಗಯಾಟ್ಸೊ 5 ನೇ ದಲೈ ಲಾಮಾ , ನಾಗ್ವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಿದರು . ಇದು ಗೆಲುಗ್ಪಾ ಪಂಥಕ್ಕೆ ಸೇರಿದ್ದು, ಭಾರತದ ಅತಿದೊಡ್ಡ ಬೌದ್ಧ ಮಠವಾಗಿದೆ.ಇದು ಟಿಬೆಟಿಯನ್ ಬೌದ್ಧರಿಗೆ ಪ್ರಮುಖ ಪವಿತ್ರ ತಾಣವಾಗಿದ್ದು, ಇದು ಆರನೇ ದಲೈ ಲಾಮಾ ಅವರ ಜನ್ಮಸ್ಥಳ.
ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!
ತವಾಂಗ್ ಸೇರಿದಂತೆ ಅರುಣಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ಬಳಸುವ ಮರದ ಪಾತ್ರೆಗಳು ಆಕರ್ಷಕವಾಗಿರುತ್ತವೆ. ಡೊಲೊಂ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಮುಚ್ಚಳವಿರುವ ಮರದ ಬೌಲ್. ಇದನ್ನು ಊಟ ಮಾಡಲು ಬಳಸುತ್ತಾರೆ. ಶೆಂಗ್ ಖ್ಲೆಂ ಎಂದರೆ ಮರದಿಂದ ಮಾಡಿದ ಚಮಚ. ಗ್ರುಕ್, ಇದು ಚಹಾ ಸೇವನೆಗೆ ಬಳಸಲಾಗುವ ಮರದ ಕಪ್.
ಇನ್ನು ಇಲ್ಲಿನ ತವಾಂಗ್ ಯುದ್ಧ ಸ್ಮಾರಕವನ್ನು ನೋಡಲೇಬೇಕು. 1962 ಇಂಡೋ – ಚೀನಾ ಯುದ್ಧದ ಸಮಯದಲ್ಲಿ ಭಾರತದ ರಕ್ಷಣೆಗೆ ತಮ್ಮ ಪರಮೋಚ್ಚ ತ್ಯಾಗ ನೀಡಿದ ಹುತಾತ್ಮರ ಗೌರವಾರ್ಥ ಕಟ್ಟಲಾಗಿದೆ . ಈ ಸ್ಮಾರಕ ಯುದ್ಧಘಟನೆಗಳು ಮತ್ತು ತಮ್ಮ ಜೀವವನ್ನು ತ್ಯಾಗ ಮಾಡಿದ ಸೈನಿಕರ ಪಟ್ಟಿಗಳನ್ನು ಒಳಗೊಂಡಿದೆ.
ಈ ಪ್ರಪಂಚದ ನಕಲಿ ದೇಶ… ಇವರು ತಿನ್ನದೇ ಇರುವ ಜೀವಿ ಇಲ್ಲ.. ಕಾಪಿ ಮಾಡೋದ್ರಲ್ಲಿ ಈ ದೇಶ ಎಕ್ಸ್ ಪರ್ಟ್..!
ಜಾತ್ರೆಗಳು ಮತ್ತು ಉತ್ಸವಗಳು ಅರುಣಾಚಲ ಪ್ರದೇಶದ ಬುಡಕಟ್ಟು ಜನರ ಜೀವನದ ಅವಿಭಾಜ್ಯ ಅಂಗ. ತವಾಂಗ್ ನಲ್ಲಿರುವ ಮೊನ್ಪ ಜನಾಂಗವೂ ಇದಕ್ಕೆ ಹೊರತಲ್ಲ. ಮೊನ್ಪ ಜನಾಂಗದ ಉತ್ಸವಗಳೂ ಕೂಡ ಹೆಚ್ಚಾಗಿ ಕೃಷಿ ಮತ್ತು ಧರ್ಮಕ್ಕೆ ಸಂಬಂಧಿಸಿರುತ್ತವೆ. ಪ್ರತಿ ವರ್ಷ ಮೊನ್ಪ ಜನಾಂಗದವರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು, ಲೊಸಾರ್ ಉತ್ಸವ. ಇದು ಹೊಸ ವರ್ಷದ ಹಬ್ಬವಾಗಿದ್ದು, ಫೆಬ್ರುವರಿಯ ಕೊನೆಯ ವಾರ ಮತ್ತು ಮಾರ್ಚದ ಮೊದಲ ವಾರದಲ್ಲಿ ಇದನ್ನು ಭಕ್ತಿಪೂರ್ವಕವಾಗಿ, ವಿಜೃಂಭಣೆಯಿಂದ ಆಚರಿಸುವರು.
ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.
ಅಸ್ಸಾಂನ ಗೌಹಾತಿ ಮತ್ತು ತೇಜ್ಪುರ್ ಮೂಲಕ ದೇಶದ ಇತರ ಭಾಗಗಳಿಂದ ತವಾಂಗ್ ತಲುಪಬಹುದು .