Team India | ಬುಮ್ರಾ ದೂರ.. ಬೌಲರ್ ಗಳ ಕೊರತೆ.. ಟೀಂ ಇಂಡಿಯಾ ಕಪ್ ಗೆಲ್ಲಲ್ವಾ ?
ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ ಪ್ರಿತ್ ಬೂಮ್ರಾ ಟಿ 20 ವಿಶ್ವಕಪ್ ಗೆ ದೂರವಾಗಿದ್ದಾರೆ. ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ದೂಡಿದೆ.
ಸದ್ಯ ಇರುವ ಪರಿಸ್ಥಿತಿಯಲ್ಲಿ ಬುಮ್ರಾ ತಂಡದಿಂದ ದೂರವಾಗಿದ್ದು ದೊಡ್ಡ ಹೊಡೆತ ಅಂತಾನೇ ಅಂದಾಜಿಲಾಗುತ್ತಿದೆ.
ಯಾಕೆಂದರೇ ಪ್ರಸ್ತುತ ಟೀಂ ಇಂಡಿಯಾಗೆ ಸರಿಯಾದ ವೇಗದ ಬೌಲರ್ ಲಭ್ಯವಿಲ್ಲ. ಇದಕ್ಕೆ ಜೊತೆಯಾಗಿ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯಗೊಂಡು ವಿಶ್ವಕಪ್ ಗೆ ದೂರವಾಗಿದ್ದಾರೆ.
ಏಕಕಾಲದಲ್ಲಿ ಬುಮ್ರಾ, ಜಡೇಜಾ ರಂತಹ ಸ್ಟಾರ್ ಆಟಗಾರರು ತಂಡಕ್ಕೆ ಅಲಭ್ಯವಾಗಿರುವುದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ದೂಡಿದೆ.
ಸದ್ಯ ಬುಮ್ರಾ ತಂಡದಿಂದ ದೂರವಾಗಿರುವುದರಿಂದ ಆತನ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಕೊರೊನಾ ಸೋಂಕಿನಿಂದ ಮೊಹ್ಮದ್ ಶಮಿ ಚೇತರಿಸಿಕೊಂಡಿದ್ದು, ಅವರು ಬುಮ್ರಾ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಶಮಿ ಬೌಲಿಂಗ್ ಆಸ್ಟ್ರೇಲಿಯಾ ಪಿಚ್ ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಶಮಿಯ ಗುಡ್ ಲೆಂಥ್ ಎಸೆತಗಳು ಎದುರಾಳಿಗಳಿಗೆ ಕಂಟಕವಾಗಬಹುದು.

ಇನ್ನು ವೇಗದ ಬೌಲರ್ ಆಗಿ ಬಂದಿರುವ ಆವೇಶ್ ಖಾನ್ ಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ.
ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಮಿಂಚುತ್ತಿದ್ರೂ ಡೆತ್ ಓವರ್ ಗಳಲ್ಲಿ ರನ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ.
ದೀಪಕ್ ಚಹಾರ್, ಅರ್ಷ್ ದೀಪ್ ಸಿಂಗ್ ತಂಡದಲ್ಲಿದ್ದರೂ ಅವರನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇಲ್ಲ.
ಯಾಕೆಂದರೆ ಇವರು ಒಂದು ಪಂದ್ಯದಲ್ಲಿ ಮಿಂಚಿದ್ರೆ ಮತ್ತೆರಡು ಪಂದ್ಯಗಳಲ್ಲಿ ವಿಫಲಾಗಿದ್ದಾರೆ. ಇನ್ನು ಡೆತ್ ಓವರ್ ಗಳ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ದುಬಾರಿಯಾಗುತ್ತಿದ್ದಾರೆ.
ಉಮೇಶ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ವಿಕೆಟ್ ಪಡೆದರೂ ರನ್ ಗಳನ್ನು ಬಿಟ್ಟುಕೊಟ್ಟರು.
ಹೀಗಾಗಿ ಟೀಂ ಇಂಡಿಯಾಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಬುಮ್ರಾ ಸ್ಥಾನದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.








