Team India : 2023ರ ಆರಂಭದಲ್ಲೇ ಟೀಮ್ ಇಂಡಿಯಾಗೆ ಸಾಲು ಸಾಳು ಮ್ಯಾಚ್ ಗಳು..!!
ಮುಂದಿನ ವರ್ಷದ ಆರಂಭದಿಂದಲ್ಲೇ ಟೀಂ ಇಂಡಿಯಾ ತವರಿನಲ್ಲಿ ಸಾಲು ಸಾಲು ಕ್ರಿಕೆಟ್ ಸರಣಿಯನ್ನ ಆಡಲಿದ್ದು, 2023ರಲ್ಲಿ ಭಾರತ ತಂಡ ತವರಿನಲ್ಲಿ ಆಡಿರುವ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದೆ.
ಮುಂದಿನ ವರ್ಷ ತವರಿನಲ್ಲೇ ನಡೆಯುವ ODI ವಿಶ್ವಕಪ್ಗೆ ತಯಾರಿ ಆರಂಭಿಸಿರುವ ರೋಹಿತ್ ಶರ್ಮ ಪಡೆ, ಶ್ರೀಲಂಕಾ, ನ್ಯೂಜಿ಼ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಹಣಾಹಣಿ ನಡೆಸಲಿದೆ.
ಹೊಸ ವರ್ಷದ ಮೊದಲ ವಾರದಲ್ಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ 2023ರ ಕ್ರಿಕೆಟ್ ಅಭಿಯಾನ ಆರಂಭಿಸಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿ ಜನವರಿ 3ರಿಂದ ಆರಂಭಗೊಳ್ಳಲಿದೆ. ಮುಂಬೈ, ಪುಣೆ ಹಾಗೂ ರಾಜ್ಕೋಟ್ನಲ್ಲಿ ಟಿ20 ಪಂದ್ಯಗಳು ನಡೆಯಲಿದೆ.
ನಂತರದಲ್ಲಿ ಎರಡು ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಜನವರಿ 10ರಿಂದ 15ರವರೆಗೂ ODI ಪಂದ್ಯಗಳು ನಡೆಯಲಿದೆ. ಗುವಾಹಟಿ, ಕೊಲ್ಕತ್ತಾ ಹಾಗೂ ತಿರುವನಂತಪುರದಲ್ಲಿ ಏಕದಿನ ಪಂದ್ಯಗಳು ನಡೆಯಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ:
ಶ್ರೀಲಂಕಾ ವಿರುದ್ಧ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ನ್ಯೂಜಿ಼ಲೆಂಡ್ ಸವಾಲು ಎದುರಿಸಲಿದೆ. ಜನವರಿ 18ರಿಂದ ಕಿವೀಸ್ ವಿರುದ್ಧದ ODI ಸರಣಿ ಆರಂಭವಾಗಲಿದ್ದು, ಹೈದ್ರಾಬಾದ್, ರಾಯ್ಪುರ್ ಹಾಗೂ ಇಂಧೋರ್ನಲ್ಲಿ ಏಕದಿನ ಪಂದ್ಯಗಳು ನಡೆಯಲಿದೆ.
ಇದಾದ ಬಳಿಕ ಎರಡು ತಂಡಗಳು ಟಿ20 ಸರಣಿಯನ್ನಾಡಲಿದ್ದು, ಜನವರಿ 27ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ರಾಂಚಿ, ಲಕ್ನೋ ಹಾಗೂ ಅಹ್ಮದಾಬಾದ್ನಲ್ಲಿ ಟಿ20 ಪಂದ್ಯಗಳ ನಡೆಯಲಿದೆ.
ಸಾಲು ಸಾಲು ವೈಟ್ ಬಾಲ್ ಕ್ರಿಕೆಟ್ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಇದು 2022-23ರ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಭಾರತ ಅಂತಿಮ ಟೆಸ್ಟ್ ಸರಣಿಯಾಗಿದೆ.
ಫೆಬ್ರವರಿ 9ರಿಂದ ಮಾರ್ಚ್ 13ರವರೆಗೆ ಎರಡು ತಂಡಗಳ ನಡುವಿನ ಟೆಸ್ಟ್ ಸರಣಿ ನಡೆಯಲಿದ್ದು, ನಾಗ್ಪುರ್, ದೆಹಲಿ, ಧರ್ಮಶಾಲಾ ಹಾಗೂ ಅಹ್ಮದಾಬಾದ್ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿದೆ.
ಇದಾದ ನಂತರದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಾರ್ಚ್ 17ರಿಂದ 22ರವರೆಗೆ ನಡೆಯಲಿದೆ. ಆ ಮೂಲಕ ಭಾರತದ ತವರಿನ ಸರಣಿಗಳು ಕೂಡ ಮುಕ್ತಾಯಗೊಳ್ಳಲಿದ್ದು, ಈ ಎಲ್ಲಾ ಸರಣಿಗಳು ಮುಗಿಯುತ್ತಿದ್ದಂತೆ 2023ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.