ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾ ಬಾಗಿಲು ಕ್ಲೋಸ್..??
ಟೀಂ ಇಂಡಿಯಾವನ್ನು ಬಹುಕಾಲದಿಂದ ಕಾಡುತ್ತಿದ್ದ ಆಲ್ ರೌಂಡರ್ ಸಮಸ್ಯೆಗೆ ಶರ್ದೂಲ್ ಠಾಕೂರ್, ದೀಪಕ್ ಚಹಾರ್ ಬರುವಿಕೆಯಿಂದ ಉತ್ತರ ಸಿಕ್ಕಿದೆ ಎಂದು ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಈ ಇಬ್ಬರು (ಟೆಸ್ಟ್, ODI) ಎರಡೂ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವ ಹಾದಿಯಲ್ಲಿದ್ದಾರೆ.
ಹಾರ್ದಿಕ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಂದ ಶರ್ದೂಲ್ ಮತ್ತು ದೀಪಕ್ ಚಹಾರ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವುದು ತಂಡಕ್ಕೆ ಶುಭ ಶಕುನವಾಗಿದೆ ಎಂದು ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶಾರ್ದೂಲ್ (43 ಎಸೆತಗಳಲ್ಲಿ ಔಟಾಗದೆ 50ರನ್ , 38 ಎಸೆತಗಳಲ್ಲಿ 40 ರನ್) ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಚಹಾರ್ (34 ಎಸೆತಗಳಲ್ಲಿ 54ರನ್ ) ಗಳಿಸಿದರು.
ಇಬ್ಬರೂ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್ ಮನ್ ಗಳಾಗುತ್ತಿದ್ದಾರೆ.
ಶ್ರೀಲಂಕಾ ಪ್ರವಾಸದ ವೇಳೆ ದೀಪಕ್ ಚಹಾರ್ ಅದ್ಬುತ ಬ್ಯಾಟಿಂಗ್ ಮಾಡಿದ್ದನ್ನು ನಾವು ನೋಡಿದ್ದೇವೆ. ತಮ್ಮ ಕೋಟಾ ಓವರ್‌ಗಳನ್ನು ಪೂರ್ಣಗೊಳಿಸುವ ಮತ್ತು ಕೆಳ ಕ್ರಮಾಂಕದಲ್ಲಿ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸುವ ಆಟಗಾರನನ್ನು ಯಾವುದೇ ತಂಡವಾದರೂ ಬಯಸುತ್ತದೆ.
ಅಂತಹ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದರೆ ಅದ್ಭುತಗಳನ್ನು ಸೃಷ್ಠಿಸುತ್ತಾರೆ ಎಂದು ಶಾರ್ದೂಲ್, ಚಹರ್ ಅವರನ್ನು ದ್ರಾವಿಡ್ ಪರೋಕ್ಷವಾಗಿ ಬೆಂಬಲಿಸಿದ್ದಾರೆ.
ಇತ್ತ ಬೆನ್ನು ನೋವಿನಿಂದ ಟೀಂ ಇಂಡಿಯಾಗೆ ದೂರವಾಗಿರುವ ಹಾರ್ದಿಕ್ ಪಾಂಡ್ಯ ಮೊದಲಿನ ಚಾರ್ಮ್ ನಲ್ಲಿಲ್ಲ. ಹೀಗಾಗಿ ಅವರನ್ನ ತಂಡದಿಂದ ಕೈ ಬಿಡಲಾಗಿದೆ.