ಕಾನ್ಪುರದಲ್ಲಿ 38 ವರ್ಷಗಳಿಂದ ಟೀಮ್ ಇಂಡಿಯಾಗೆ ಸೋಲೇ ಇಲ್ಲ..!

1 min read

ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೊದಲ ಟೆಸ್ಟ್ ಪಂದ್ಯ ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಟೀಮ್ ಇಂಡಿಯಾದ ಮಟ್ಟಿಗೆ ಕಾನ್ಪುರ ಅದೃಷ್ಟ ತಾಣ. ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಎದುರಾಳಿ ತಂಡಗಳಿಗೆ ರೆಡ್ ಸಿಗ್ನಲ್ ಕಳುಹಿಸಿದ ಇತಿಹಾಸ ಹೊಂದಿದೆ.

ಗ್ರೀನ್ಪಾರ್ಕ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಇದು 4ನೇ ಟೆಸ್ಟ್ ಪಂದ್ಯ.

1976ರಲ್ಲಿ ಟೀಮ್ ಇಂಡಿಯಾ ಮತ್ತು ಕಿವೀಸ್ ನಡುವೆ ಇಲ್ಲಿ ಮೊದಲ ಹೋರಾಟ ನಡೆದಿತ್ತು.

ಆ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. 1999ರಲ್ಲಿ ಇದೇ ಮೈದಾನದಲ್ಲಿ ಈ ಎರಡು ತಂಡಗಳ ನಡುವೆ 2ನೇ ಸಮರ ನಡೆಯಿತು.

ಆ ಪಂದ್ಯವನ್ನು ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಗೆದ್ದು ಬೀಗಿತು. 2016ರಲ್ಲಿ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿ ಆಗಿದ್ದವು.

Team India saakshatv

ಆಗಲೂ ಭಾರತ 197 ರನ್ಗಳ ಭರ್ಜರಿ ವಿಜಯ ಸಾಧಿಸಿತು. ಈಗ 4ನೇ ಬಾರಿ ಗ್ರೀನ್ ಪಾರ್ಕ್ನಲ್ಲಿ ಮುಖಾಮುಖಿ ಆಗುತ್ತಿವೆ.

ಟೀಮ್ ಇಂಡಿಯಾ ಕಿವೀಸ್ ವಿರುದ್ಧ ಕಾನ್ಪುರದಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.

ಇನ್ನೊಂದು ರೀತಿಯಲ್ಲಿ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತದ ದಾಖಲೆ ಕೂಡ ಉತ್ತಮವಾಗಿದೆ.

ಇಲ್ಲಿ ಆಡಿರುವ 22 ಟೆಸ್ಟ್ ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆದ್ದು 3ರಲ್ಲಿ ಸೋತಿದ್ದರೆ, 12 ಟೆಸ್ಟ್ಗಳು ಡ್ರಾ ಕಂಡಿವೆ.

ಕಾನ್ಪುರದಲ್ಲಿ ಟೀಂ ಇಂಡಿಯಾದ ಕೊನೆಯ ಸೋಲು ಕಂಡಿದ್ದು 1983 ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡ ನಂತರ ಇಲ್ಲಿ ತನಕ ಈ ಮೈದಾನದಲ್ಲಿ ಸೋತಿಲ್ಲ.

ಈಗ ಮತ್ತೊಮ್ಮೆ ಗ್ರೀನ್ಪಾರ್ಕ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಹೊಸ ನಾಯಕ ಮತ್ತು ಹೊಸ ತಂಡ ಅದೇನು ಇತಿಹಾಸ ಸೃಷ್ಟಿ ಮಾಡುತ್ತದೆ ಅನ್ನುವ ಬಗ್ಗೆ ಕುತೂಹಲವಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd