ಛೇ..ಛೇ.. ಛೇ.. 36 ರನ್…
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಕನಿಷ್ಠ ಸ್ಕೋರ್..!
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ತೀರಾ ಕಳಪೆ ಮಟ್ಟದ ಪ್ರದರ್ಶನಕ್ಕೆ ಆಸ್ಟ್ರೇಲಿಯಾದ ಆಡಿಲೇಡ್ ಕ್ರೀಡಾಂಗಣ ಸಾಕ್ಷಿಯಾಯ್ತು.
ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ್ರು. ಟೆಲಿಫೋನ್ ಸಂಖ್ಯೆಯಂತೆ ರನ್ ಗಳಿಸಿದ್ದ ಟೀಮ್ ಇಂಡಿಯಾ ಭಾರತೀಯ ಟೆಸ್ಟ್ ಕ್ರಿಕೆಟ್ ನಲ್ಲಿ ತೀರಾ ಕನಿಷ್ಠ ರನ್ ಗಳಿಸಿದ್ದ ಕುಖ್ಯಾತಿಗೂ ಪಾತ್ರರಾದ್ರು.
ಇಲ್ಲಿಯವರೆಗೆ ಟೀಮ್ ಇಂಡಿಯಾ ಒಟ್ಟು ಆರು ಬಾರಿ ನೂರಕ್ಕಿಂತ ಕಮ್ಮಿ ರನ್ ಗೆ ಆಲೌಟ್ ಆಗಿದೆ. ಆದ್ರೆ ಈ ಬಾರಿ 36 ರನ್ ಗಳಿಸಿದ್ರೂ ಆಲೌಟ್ ಆಗಿಲ್ಲ. ಯಾಕಂದ್ರೆ ಮಹಮ್ಮದ್ ಶಮಿ ಗಾಯಗೊಂಡು ಕ್ರೀಸ್ ನಿಂದ ಹೊರ ನಡೆದಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ಕನಿಷ್ಠ ರನ್..
ಡಿಸೆಂಬರ್ 19, 2020- ಆಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ್ದ ರನ್ 36/9
ಜೂನ್ 20, 1974 – ಲಾಡ್ರ್ಸ್ ನಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ಗಳಿಸಿದ್ದ ರನ್ 42
ನವೆಂಬರ್ 28, 1947- ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ್ದ ರನ್ 58
ಜುಲೈ 17 1952 – ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಪೇರಿಸಿದ್ದ ರನ್ 58
ಡಿಸೆಂಬರ್ 26 1996- ಡರ್ಬಾನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ದಾಖಲಿಸಿದ್ದ ರನ್ 66
ಫೆಬ್ರವರಿ 6 1948 – ಮೆಲ್ಬರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ್ದ ರನ್ 67
ಒಟ್ಟಿನಲ್ಲಿ ಟೀಮ್ ಇಂಡಿಯಾ ಆಸಿಸ್ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲು ಅನುಭವಿಸಿದೆ. ಛೇ.. ಛೇ.. 36 ರನ್. ಇದೇನಾ ವಿರಾಟ್ ಕೊಹ್ಲಿಯ ಬಲಿಷ್ಠ ಟೀಮ್ ಇಂಡಿಯಾ ಅನ್ನೋ ಅನುಮಾನ ಕೂಡ ಬರುತ್ತೆ. ಏನೇ ಆದ್ರೂ ಈ ಸೋಲು ವಿರಾಟ್ ಪಡೆಗೆ ತಕ್ಕ ಪಾಠ ಕಲಿಸಿದೆ. 2020ರ ವರ್ಷವನ್ನು ವಿರಾಟ್ ಕೊಹ್ಲಿ ಹೀನಾಯ ಸೋಲಿನೊಂದಿಗೆ ಮುಗಿಸಿದ್ದಾರೆ. ಮುಂದಿನದ್ದು ರಹಾನೆ ಸರದಿ.. ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಾದ್ರೂ ಟೀಮ್ ಇಂಡಿಯಾ ತಿರುಗೇಟು ನೀಡಿ ಸೇಡು ತೀರಿಸಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡುವ..!