ಮೆಲ್ಬೋರ್ನ್ ನಲ್ಲಿ ಗೋ ಮಾಂಸ ತಿಂದ್ರಾ ಟೀಂ ಇಂಡಿಯಾ ಆಟಗಾರರು?
ಮೆಲ್ಬೋರ್ನ್ ನಲ್ಲಿ ಗೋ ಮಾಂಸ ತಿಂದ್ರಾ ಟೀಂ ಇಂಡಿಯಾ ಆಟಗಾರರು..? ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಇದರದಲ್ಲೇ ಚರ್ಚೆ..!
ಮೆಲ್ಬೋರ್ನ್ ರೆಸ್ಟೋರೆಂಟ್ ವೊಂದರಲ್ಲಿ ಅಭಿಮಾನಿಯೊಬ್ಬ ಟೀಂ ಇಂಡಿಯಾ ಆಟಗಾರರ ಬಿಲ್‍ನ ಪಾವತಿಸಿದ್ದೀಗ ಹಳೆಯ ವಿಷಯ.
ಆದರೆ, ಇದೀಗ ಟೀಂ ಇಂಡಿಯಾ ಆಟಗಾರರು ಅಂದು ಗೋಮಾಂಸ ತಿಂದಿದ್ದಾರೆ ಎಂದು ಫೋಟೋ ಒಂದು ವೈರಲ್ ಆಗಿದೆ. ವೈರಲ್ ಆಗಿರುವ ಬಿಲ್ ನ ಫೋಟೋ ಕಂಡು ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೆಸ್ಟೋರೆಂಟ್ ಗೆ ತೆರಳಿದ್ದ ಭಾರತದ ತಂಡದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್‍ಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಊಟ ಸೇವಿಸಿದ್ದರು. ಇದರ ಬಿಲ್ನನ್ನ ಓರ್ವ ಅಭಿಮಾನಿ ಪಾವತಿಸಿ, ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದ.
ಹೆಚ್ ಡಿಕೆಗೆ ಕೇಂದ್ರ ಸಚಿವಸ್ಥಾನ | ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಇದು ಹೊಸ ಪ್ಲಾನಾ..?
ಆ ಅಭಿಮಾನಿ ಬಿಲ್‍ನ ಅರ್ಧ ಭಾಗವನ್ನು ಮುಚ್ಚಿಕೊಂಡು ಒಟ್ಟು ಮೊತ್ತವನ್ನಷ್ಟೇ ಕಾಣುವಂತೆ ಫೋಟೋ ತೆಗೆದು ಫೋಸ್ಟ್ ಮಾಡಿದ್ದ. ಆದರೆ, ಈಗ ಅದೇ ಬಿಲ್ ಎನ್ನಲಾಗುವ ಮತ್ತೊಂದು ಫೋಟೋ ವೈರಲ್ ಆಗಿದ್ದು, ಅದರಲ್ಲಿ ಫೋರ್ಕ್ ಮತ್ತು ಬೀಫ್ ಕೂಡ ಇದೆ.

ಸದ್ಯ ಈ ಫೋಟೋ ಕಂಡಿರುವ ಅಭಿಮಾನಿಗಳು ಬೀಫ್ ತಿಂದವರು ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಈ ವಿಚಾರವಾಗಿ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕ ಅಭಿಮಾನಿಗಳು ರೋಹಿತ್ ಶರ್ಮಾ ಅವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಟೀಂ ಇಂಡಿಯಾದ ಆಟಗಾರರು ರೆಸ್ಟೋರೆಂಟ್ ನಲ್ಲಿ ಊಟ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಟಗಾರರು ಜೈವಿಕ ಸುರಕ್ಷಿತ ಬಯೋಬಬಲ್ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು, ನೆಟ್ಟಿಗರು ಕ್ರಮಕ್ಕೆ ಒತ್ತಾಯಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








