ಭಾರತೀಯ ಕ್ರಿಕೆಟ್ನ ಅಪೆಕ್ಸ್ ಬಾಡಿಯಾಗಿರುವ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಹಿರಿಯ ಪುರುಷರ ತಂಡದ ಆಟಗಾರರ ಆಯ್ಕೆ ಸಮಿತಿ ಸದಸ್ಯರಿಗಾಗಿ ಅರ್ಜಿ ಆಹ್ವಾನಿಸಿದೆ.
ಬಿಸಿಸಿಐನ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಜೂ.30ರಂದು ಕಡೆಯ ದಿನವಾಗಿದೆ. ಅಲ್ಲದೇ ಆಯ್ಕೆಯಾದ ಅಭ್ಯರ್ಥಿಗಳನ್ನು ಆಡಳಿತ ಮಂಡಳಿಯಿಂದ ಅಂತಿಮ ನಿರ್ಧಾರಕ್ಕೆ ಬರಲು ಸಂದರ್ಶನ ಸಹ ನಡೆಸಲಾಗುತ್ತದೆ.
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನ ಆಯ್ಕೆ ಮಾಡಬೇಕಿದ್ದು, ಇದರ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಮಂಡಳಿ ಸದಸ್ಯರ ಸ್ಥಾನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆಯ್ಕೆ ಸಮಿತಿ ಸದಸ್ಯರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಏಳು ಟೆಸ್ಟ್ ಪಂದ್ಯಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 20 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರಬೇಕು.
ಅಲ್ಲದೇ ಅರ್ಜಿದಾರರು ಕನಿಷ್ಠ ಐದು ವರ್ಷಗಳ ಮೊದಲು ಕ್ರಿಕೆಟ್ನಿಂದ ನಿವೃತ್ತರಾಗಿರಬೇಕು. ಐದು ವರ್ಷಗಳಲ್ಲಿ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರಬಾರದು. ಪುರುಷರ ಆಯ್ಕೆ ಸಮಿತಿಯ ಸದಸ್ಯರಾಗಿರಲು ಅರ್ಹರಾಗಿರುವುದಿಲ್ಲ. ಆಯ್ಕೆ ಸಮಿತಿ ಸದಸ್ಯರು ಟೆಸ್ಟ್, ಏಕದಿನ, ಟಿ20 ಮತ್ತು ಇತರ ಯಾವುದೇ ಸ್ವರೂಪದ ಪಂದ್ಯಾವಳಿಗಳಿಗೆ ಭಾರತದ ಹಿರಿಯ ರಾಷ್ಟ್ರೀಯ ತಂಡದ ಆಯ್ಕೆ ಮಾಡಬೇಕಿದೆ.