ಚಾಂಪಿಯನ್ಸ್ ಟ್ರೋಫಿ 2025ನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಗೆಲುವು ದಾಖಲಿಸಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ನಿರ್ಗಮಿಸಿದ್ದು, ಇದರ ಬೆನ್ನಲ್ಲೇ ಭಾರತ vs ಪಾಕಿಸ್ತಾನ್ ನಡುವಿನ ಮುಂದಿನ ಪಂದ್ಯ ಯಾವಾಗ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
2025ರ ಅಂತ್ಯ ಅಥವಾ 2026ರ ಆರಂಭದಲ್ಲಿ ನಡೆಯುವ ಏಷ್ಯಾಕಪ್ ಟಿ20ಯಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಭಾರತ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಆತಿಥ್ಯವಹಿಸಲಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಎದುರಾಗಲಿದ್ದು, ಅಭಿಮಾನಿಗಳಿಗೆ ಮತ್ತೊಮ್ಮೆ ಹೈವೋಲ್ಟೇಜ್ ಹೋರಾಟ ನೋಡುವ ಅವಕಾಶ ಸಿಗಲಿದೆ.
ಭಾರತ vs ಪಾಕಿಸ್ತಾನ – ಕ್ರಿಕೆಟ್ ಯುದ್ಧಕ್ಕೆ ಮತ್ತೆ ಸಜ್ಜು
ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯ ಎಂದರೆ ಬೌಂಡರಿ-ಸಿಕ್ಸರ್‌ಗಳ ಅಬ್ಬರ, ವೀಕ್ಷಕರ ಜೋರಾದ ಹರ್ಷೋದ್ಗಾರಗಳು! ಈ ಬಾರಿ ಏಷ್ಯಾಕಪ್‌ನಲ್ಲಿ ಈ ಹಳೆಯ ಪ್ರತಿಸ್ಪರ್ಧಿಗಳು ಮತ್ತೆ ಕಣಕ್ಕಿಳಿದರೆ, ಚಾಂಪಿಯನ್ಸ್ ಟ್ರೋಫಿಯ ಗೆಲುವಿನ ಲಯ ಮುಂದುವರಿಸುತ್ತಾ ಭಾರತ ಮಿಂಚುತ್ತದಾ? ಅಥವಾ ಈ ಬಾರಿ ಪಾಕಿಸ್ತಾನ ಬಲಿಷ್ಠವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದಾ? ಎಂಬ ಕುತೂಹಲ ಸಾಕಷ್ಟು ಹೆಚ್ಚಾಗಿದೆ.
ಇನ್ನಷ್ಟು ವಿವರಗಳಿಗೆ ಅಧಿಕೃತ ವೇಳಾಪಟ್ಟಿ ಹೊರಬೀಳುವವರೆಗೂ ಕಾಯಬೇಕು!








