ನ್ಯೂಜಿಲೆಂಡ್ ವಿರುದ್ಧ ಗೆಲ್ಲಲಿಲ್ಲ ಅಫ್ಘಾನಿಸ್ತಾನ, ಸೆಮಿಫೈನಲ್ನಿಂದ ಹೊರಬಿತ್ತು ಟೀಮ್ ಇಂಡಿಯಾ..!
ಟೀಮ್ ಇಂಡಿಯಾ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಅಫ್ಘಾನಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲಿಲ್ಲ. ಕೊನೆಯ ಲೀಗ್ ಪಂದ್ಯದಲ್ಲಿ ಕಿವೀಸ್ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಸ್ಥಾನ ಖಚಿತ ಮಾಡಿಕೊಂಡಿದೆ. ನಮಿಬಿಯಾ ವಿರುದ್ಧ ಟೀಮ್ ಇಂಡಿಯಾ ಔಪಚಾರಿಕ ಪಂದ್ಯ ಆಡಲಿದೆ.
ಅಬುದಾಭಿಯಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಆದರೆ ನ್ಯೂಜಿಲೆಂಡ್ ಬೌಲರ್ಗಳು ಅಫ್ಘಾನಿಸ್ತಾನದ ಟಾಪ್ ಆರ್ಡರ್ ಅನ್ನು ಉಡೀಸ್ ಮಾಡಿದರು. ಮೊಹಮ್ಮದ್ ಶೆಹಜಾದ್ 4 ರನ್ಗಳಿಸಿದರೆ, ಹಝರತುಲ್ಲಾ ಝಝಾಯಿ 2 ರನ್ ಗಳಿಸಿದರು. ರಹಮತುಲ್ಲಾ ಗುರ್ಬಾಜ್ 6 ರನ್ಗೆ ಆಟ ಮುಗಿಸಿದ್ರು. ಗುಲ್ಬಾದಿನ್ ನಯಿಮ್ 15 ರನ್ಗಳಿಸಿದರು.
ಇದೆಲ್ಲದರ ಮಧ್ಯೆ ಅಫ್ಘನ್ ಇನ್ನಿಂಗ್ಸ್ಗೆ ಜೀವ ತುಂಬಿದ್ದು ನಜಿಬುಲ್ಲ ಜದ್ರಾನ್. ಜದ್ರಾನ್ 48 ಎಸೆತಗಳಲ್ಲಿ 73 ರನ್ಗಳಿಸಿದರು. ನಬಿ, ಕರಿಮ್ ಜನ್ನತ್ ಕೂಡ ಹೆಚ್ಚು ಕೊಡುಗೆ ನೀಡಲಿಲ್ಲ. 20 ಓವರುಗಳಲ್ಲಿ ಅಫ್ಘಾನಿಸ್ತಾನ 8 ವಿಕೆಟ್ ಕಳೆದುಕೊಂಡು ಕೇವಲ 124 ರನ್ಗಳಷ್ಟೇ ಗಳಿಸಿತು.
ಚೇಸಿಂಗ್ಗೆ ಹೊರಟ ನ್ಯೂಜಿಲೆಂಡ್ ಎಲ್ಲೂ ಪಟ್ಟು ಬಿಟ್ಟುಕೊಡಲಿಲ್ಲ. ಮಾರ್ಟಿನ್ ಗಪ್ಟಿಲ್ 28 ರನ್ಗಳಿಸಿದರೆ, ಡೆರಿಲ್ ಮಿಚೆಲ್ 17 ರನ್ಗಳಿಸಿದರು.
ಕೇನ್ ವಿಲಿಯಮ್ಸನ್ ಅಜೇಯ 40 ರನ್ಗಳಿಸಿದರೆ, ಡೆವೊನ್ ಕಾನ್ವೆ ಅಜೇಯ 36ರನ್ಗಳಿಸಿದರು. ಕಿವೀಸ್ 18.1 ಓವರುಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ಸಂಭ್ರಮ ಆಚರಿಸಿಕೊಂಡಿತು. ಈ ಗೆಲುವಿನ ಜೊತೆ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ ಪಡೆದರೆ, ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿತ್ತು.