Team India Test Captain : ಟೆಸ್ಟ್ ಕ್ಯಾಪ್ಟನ್ಸಿ ರೇಸ್ ನಲ್ಲಿ ಹೊಸ ಕುದುರೆ..!!
ಟೀಂ ಇಂಡಿಯಾದಲ್ಲಿ ಇದೀಗ ಹೊಸ ಶಕೆ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಿಸುತ್ತಿದ್ದಂತೆ ಭಾರತೀಯಕ ಕ್ರಿಕೆಟ್ ನಲ್ಲಿ ಅಧ್ಯಾಯವೊಂದು ಮುಗಿದಂತೆ ಆಗಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಮಹಾರಾಜನಂತೆ ಮೆರೆಸಿದ್ದ ವಿರಾಟ್, ಏಕಾಏಕಿ ತಂಡದ ಸಾರಥ್ಯವನ್ನು ತ್ಯಜಿಸಿದ್ದಾರೆ. ಆ ಮೂಲಕ ಹೊಸ ಕುತೂಹಲಗಳಿಗೆ ನಾಂದಿಯಾಡಿದ್ದಾರೆ. team-india-test-captain-race-mohammed-shami saaksha tv
ಮುಖ್ಯವಾಗಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು..? ಟೀಂ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಮುನ್ನಡೆಸುವವರು ಯಾರು..? ಎಂಬ ಪ್ರಶ್ನೆಗಳು ಕ್ರೀಡಾ ವಲಯದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಇದಕ್ಕೆ ರೆಡಿಮೇಡ್ ಹೆಸರು ಕೂಡ ಬಿಸಿಸಿಐ ಬಳಿ ಇದೆ. ಅದು ಬೇರೆ ಯಾರು ಅಲ್ಲ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ..!!
ಹೌದು..! ವಿರಾಟ್ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿದ ಕೂಡಲೇ ರೋಹಿತ್ ಚುಟುಕು ಕ್ರಿಕೆಟ್ ನಲ್ಲಿ ಭಾರತವನ್ನು ಮುನ್ನಡೆಸಿದ್ರು. ಬಳಿಕ ಬಿಸಿಸಿಐ ಬಿಗ್ ಬಾಸ್ ಗಳು ವಿರಾಟ್ ಬಳಿ ಇದ್ದ ಏಕದಿನ ನಾಯಕತ್ವವನ್ನು ಕಿತ್ತುಕೊಂಡು ರೋಹಿತ್ ಗೆ ಪಟ್ಟಾಭಿಷೇಕ ಮಾಡಿದ್ರು. ಅಲ್ಲದೇ ಟೆಸ್ಟ್ ತಂಡದಲ್ಲಿ ಖಾಯಂ ಅಲ್ಲದ ರೋಹಿತ್ ಗೆ ಉಪನಾಯಕನ ಪಟ್ಟ ಕೊಟ್ಟು, ವಿರಾಟ್ ತಲೆಯ ಮೇಲೆ ಗೂಟ ಇಟ್ಟಿದ್ದರು.
ಆದರೇ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೆ.ಎಲ್.ರಾಹುಲ್ ಮುನ್ನಲೆಗೆ ಬಂದ್ರು. ರೋಹಿತ್ ಇಂಚೂರಿಯ ಕಾರಣ, ಕೆ.ಎಲ್. ರಾಹುಲ್, ವಿರಾಟ್ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡವನ್ನು, ರೋಹಿತ್ ಅನುಪಸ್ಥಿತಿಯಲ್ಲಿ ಏಕದಿನ ತಂಡವನ್ನು ಮುನ್ನಡೆಸಿದರು. ಆ ಮೂಲಕ ಕ್ಯಾಪ್ಟನ್ಸಿ ರೇಸ್ ನಲ್ಲಿ ಕೆ.ಎಲ್.ರಾಹುಲ್ ಕಾಣಿಸಿಕೊಂಡರು. ಇದಲ್ಲದೇ ಜಸ್ಪ್ರೀತ್ ಬುಮ್ರಾ, ವಿಕೆಟ್ ಕೀಪರ್ ರಿಷಬ್ ಪಂತ್ ಹೆಸರು ಕೂಡ ಟೆಸ್ಟ್ ನಾಯಕನ ರೇಸ್ ನಲ್ಲಿ ಕಾಣಿಸಿಕೊಂಡಿದೆ.

ಇದೀಗ ಈ ರೇಸ್ ಗೆ ಮತ್ತೊಂದು ಹೆಸರು ಸೇರಿಕೊಂಡಿದೆ. ಕ್ಯಾಪ್ಟನ್ಸಿ ರೇಸ್ ನಲ್ಲಿ ಟೀಂ ಇಂಡಿಯಾದ ರೇಸ್ ಕುದುರೆ.. ಮೊಹ್ಮದ್ ಶಮಿ ಹೆಸರು ಕೇಳಿಬಂದಿದೆ. ಈ ಬಗ್ಗೆ ಅವರೇ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ. ಸ್ಟಾರ್‌ಗಳಿಂದ ತುಂಬಿರುವ ಭಾರತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಯಾರು ಬಯಸುವುದಿಲ್ಲ . ನಾಯಕತ್ವದ ಪ್ರಸ್ತಾವನೆ ಬಂದರೆ ಒಪ್ಪಿಕೊಳ್ಳುತ್ತೇನೆ. ತಂಡಕ್ಕೆ ಉಪಯೋಗವಾಗುವ ಯಾವುದೇ ಕಾರ್ಯಕ್ಕೂ ನಾವು ಸಿದ್ಧ ಎಂದಿದ್ದಾರೆ.