ಎರಡನೇ ಕೋವಿಡ್ ಲಸಿಕೆ ಪಡೆದುಕೊಳ್ಳಲಿರುವ ಟೀಮ್ ಇಂಡಿಯಾ ಆಟಗಾರರು
ಟೀಮ್ ಇಂಡಿಯಾ ಆಟಗಾರರು ಜುಲೈ 7 ಮತ್ತು 9ರಂದು ಎರಡನೇ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.
ಕೋವಿಡ್ ಎರಡನೇ ಹಂತದ ಲಸಿಕೆಯನ್ನು ಟೀಮ್ ಇಂಡಿಯಾ ಆಟಗಾರರು ಬುಧವಾರ ಮತ್ತು ಶುಕ್ರವಾರದಂದು ಪಡೆಯಲಿದ್ದಾರೆ ಎಂದು ಟೀಮ್ ಇಂಡಿಯಾದ ಮೂಲಗಳಿಂದ ತಿಳಿದು ಬಂದಿದೆ.
ಇಂಗ್ಲೆಂಡ್ ನಲ್ಲಿರುವ ವಿರಾಟ್ ಕೊಹ್ಲಿ ಬಳಗದವರು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ವಿಶ್ರಾಂತಿಯಲ್ಲಿದ್ದರು. ಈ ನಡುವೆ ತಂಡದ ಆಟಗಾರರು ರಿಲ್ಯಾಕ್ಸ್ ಮೂಡ್ ನಲ್ಲೂ ಇದ್ದರು.
ಐದು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 4ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು ಜುಲೈ 14ರಿಂದ ಟೀಮ್ ಇಂಡಿಯಾ ಆಟಗಾರರು ಕ್ವಾರಂಟೈನ್ ನೊಳಗೆ ಪ್ರವೇಶಿಸಲಿದ್ದಾರೆ.
ಹಾಗೇ ಜುಲೈ 20ರಿಂದ22ರವರೆಗೆ ಅಭ್ಯಾಸ ಪಂದ್ಯವನ್ನು ಟೀಮ್ ಇಂಡಿಯಾ ಆಡಲಿದೆ. ಈ ಬಗ್ಗೆ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮನವಿಯನ್ನು ಕೂಡ ಮಾಡಿಕೊಂಡಿದೆ. ಟೆಸ್ಟ್ ಸರಣಿಗೆ ಮುನ್ನ ಅಭ್ಯಾಸ ಪಂದ್ಯ ಬೇಕು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಹೇಳಿದ್ದರು.
ಇನ್ನೊಂದೆಡೆ ಟೀಮ್ ಇಂಡಿಯಾದ ಆರಂಭಿಕ ಶುಬ್ಮನ್ ಗಿಲ್ ಗಾಯಗೊಂಡು ಸರಣಿಯಿಂದಲೇ ಹೊರನಡೆದಿದ್ದಾರೆ. ಮತ್ತೊಂದೆಡೆ ವೇಗಿ ಇಶಾಂತ್ ಶರ್ಮಾ ಕೂಡ ಬೌಲಿಂಗ್ ಮಾಡುವ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಟೆಸ್ಟ್ ಪಂದ್ಯ ಆರಂಭವಾಗುವುದಕ್ಕಿಂತ ಮುನ್ನ ಇಶಾಂತ್ ಶರ್ಮಾ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ ಟೀಮ್ ಮ್ಯಾನೇಜ್ ಮೆಂಟ್








