ಟೀಮ್ ಇಂಡಿಯಾ VS ನ್ಯೂಜಿಲೆಂಡ್ 1st ಟೆಸ್ಟ್ : ಭಾರತಕ್ಕೆ ಅಗ್ನಿಪರೀಕ್ಷೆ

1 min read

ಟೀಮ್ ಇಂಡಿಯಾ VS ನ್ಯೂಜಿಲೆಂಡ್ 1st ಟೆಸ್ಟ್, ಕೊರತೆಗಳ ಮಧ್ಯೆಯೂ ಟೀಮ್ ಇಂಡಿಯಾ ಫೆವರೀಟ್..!

ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಳಿಕ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗಿದೆ.

ಅಚ್ಚರಿ ಅಂದ್ರೆ WTC ಫೈನಲ್ನಲ್ಲಿ ಎದುರಾಗಿದ್ದ ನ್ಯೂಜಿಲೆಂಡ್ ತಂಡವೇ ಟೀಮ್ ಇಂಡಿಯಾಕ್ಕೆ ಇಲ್ಲೂ ಎದುರಾಳಿ ಆಗಿದೆ.

ತವರಿನಲ್ಲಿ ಟೀಮ್ ಇಂಡಿಯಾ ಕಿವೀಸ್ ಸವಾಲು ಎದುರಿಸುತ್ತಿರುವುದರಿಂದ ಫೆವರಿಟ್ ಆಗಿ ಕಾಣುತ್ತಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ರಿಷಬ್ ಪಂತ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ವಿಶ್ರಾಂತಿಯಲ್ಲಿದ್ದಾರೆ.

ಹೀಗಾಗಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು.

Team India saaksha tv

ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಆಟ ಟಾಪ್ ಆರ್ಡರ್ನ ಮಹತ್ವ ತಿಳಿಸಲಿದೆ.

ಸೂರ್ಯ ಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಮೊದಲ ಪಂದ್ಯ ಆಡಬಹುದು.

ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಅಶ್ವಿನ್, ಅಕ್ಸರ್ ಸ್ಪಿನ್ ವಿಭಾಗವನ್ನು ನೋಡಿಕೊಂಡರೆ, ಉಮೇಶ್ ಮತ್ತು ಇಶಾಂತ್ ಫಾಸ್ಟ್ ಬೌಲಿಂಗ್ ವಿಭಾಗದ ಹೊಣೆ ಹೊರಲಿದ್ದಾರೆ.

ನ್ಯೂಜಿಲೆಂಡ್ ಕೂಡ ಬಲಿಷ್ಠವಾಗಿ ಕಾಣುತ್ತಿದೆ. ಟಾಮ್ ಲೇಥಮ್, ಟಾಮ್ ಬ್ಲಂಡಲ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್ ನೀಲ್ ವ್ಯಾಗ್ನರ್ರಂತಹ ಆಟಗಾರಿದ್ದಾರೆ.

ಹೀಗಾಗಿ ವಿಶ್ವಚಾಂಪಿಯನ್ ಕಿವೀಸ್ ತಂಡವೂ ಬಲಿಷ್ಠವಾಗಿ ಕಾಣುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ದೊಡ್ಡ ಫೈಟ್ ನಡೆಯುವುದು ಗ್ಯಾರೆಂಟಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd