ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಗೆಲುವು ಸುಲಭವಲ್ಲ..!

1 min read
Team India saaksha tv

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಗೆಲುವು ಸುಲಭವಲ್ಲ..! Team India saaksha tv

ಪಾಕಿಸ್ತಾನದ ವಿರುದ್ಧದ ಸೋಲಿನ ನಂತರ ಟಿ20 ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡವಾಗಿದ್ದ ಟೀಮ್ ಇಂಡಿಯಾ ಈಗ ಟೂರ್ನಿಯಿಂದ ಹೊರ ಬೀಳುವ ಆತಂಕದಲ್ಲಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯುವ ಪಂದ್ಯ ಒಂದು ರೀತಿಯಲ್ಲಿ ಟೀಮ್ ಇಂಡಿಯಾಕ್ಕೆ ಮಾಡು ಇಲ್ಲವೆ ಮಡಿ ಪಂದ್ಯದಂತೆಯೇ ಆಗಿದೆ. ಆದರೆ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಬೇಕಾದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕು. ಕಿವೀಸ್ ವಿರುದ್ಧ ಪಂದ್ಯ ಗೆಲ್ಲಬೇಕಾದರೆ ಟೀಮ್ ಇಂಡಿಯಾ ತನ್ನೊಳಗಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ.

6ನೇ ಬೌಲಿಂಗ್ ಆಪ್ಶನ್ ಯಾರು..?

ಪಾಕ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಕಂಡ ಬಳಿಕ ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಒತ್ತಡ ಹೆಚ್ಚಿದೆ. ಜಸ್ ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ಫ್ರಂಟ್ ಲೈನ್ ಬೌಲರ್ ಗಳಾಗಿ ಆಡಿದ್ದರು. ಆಲ್ರೌಂಡರ್ ಜಡೇಜಾ 5ನೇ ಬೌಲರ್ ಆಗಿದ್ದರು. ಆದರೆ ಯಾರಿಗೂ ವಿಕೆಟ್ ಸಿಗಲಿಲ್ಲ. ಈಗ ಬೌಲಿಂಗ್ ಯೂನಿಟ್ ಅನ್ನು ಬದಲಿಸಬೇಕು ಅನ್ನುವ ಚರ್ಚೆ ಜೋರಾಗುತ್ತಿದೆ. ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್ ಕಣಕ್ಕಿಳಿದರೆ 6ನೇ ಬೌಲರ್ ಸಿಕ್ಕಂತಾಗುತ್ತದೆ ಅನ್ನುವ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಭುವನೇಶ್ವರ್ ಅಥವಾ ವರುಣ್ ಚಕ್ರವರ್ತಿ ಜಾಗದಲ್ಲಿ ಅಶ್ವಿನ್ ಆಡಿದರೆ ಅನುಭವಿ ಸ್ಪಿನ್ನರ್ ಸೇವೆ ಸಿಗಲಿದೆ. ಅಶ್ವಿನ್ ಬೌಲಿಂಗ್ ಆರಂಭಿಸುವ ತಾಕತ್ತು ಕೂಡ ಹೊಂದಿದ್ದಾರೆ.

ಟಚ್ ಕಂಡುಕೊಳ್ಳಬೇಕಿದೆ ಬ್ಯಾಟ್ಸ್ಮನ್ಗಳು..!

ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ಗಳು ಪಾಕ್ ವಿರುದ್ಧದ ಪಂದ್ಯದಲ್ಲಿ ಟಚ್ ಕಳೆದುಕೊಂಡವರಂತೆ ಇದ್ದರು. ಆದ್ರೆ ಕಿವೀಸ್ ವಿರುದ್ಧ ಎಲ್ಲರೂ ಸ್ಪೋಟಕ ಬ್ಯಾಟಿಂಗ್ ಮಾಡಬೇಕಾಗುತ್ತದೆ. ರಾಹುಲ್, ರೋಹಿತ್ ಮತ್ತು ಸೂರ್ಯ ಕುಮಾರ್ ದೊಡ್ಡ ರನ್ಗಳಿಸಿದರೆ ತಂಡ ಸುಲಭವಾಗಿ ಗೆಲ್ಲಬಹುದು. ಬೌಲಿಂಗ್ ನಲ್ಲಿ ಶಮಿ, ಬುಮ್ರಾ ಮತ್ತು ಭುವನೇಶ್ವರ್ ಮೊನಚು ಕಂಡುಕೊಳ್ಳುವುದು ಅನಿವಾರ್ಯ.

Team India saaksha tv

ಅದೃಷ್ಟದ ಟಾಸ್ ಕೈ ಹಿಡಿಯಬೇಕು..!

ದುಬೈನಲ್ಲಿ ಟಾಸ್ ಪಂದ್ಯದ ಫಲಿತಾಂಶವನ್ನು ನಿರ್ಣಯಮಾಡುತ್ತಿದೆ. ರಾತ್ರಿಯಾದ ಮೇಲೆ ಬೀಳುವ ಇಬ್ಬನಿ ಬೌಲರ್ಗಳಿಗೆ ಕಾಟ ಕೊಟ್ಟರೆ ಬ್ಯಾಟ್ಸ್ಮನ್ಗಳು ಸರಾಗವಾಗಿ ರನ್ಗಳಿಸುವಂತೆ ಮಾಡಿದೆ. ಹೀಗಾಗಿ ಯಾರ ನಿಯಂತ್ರಣದಲ್ಲೂ ಇಲ್ಲದ ಟಾಸ್ ಟೀಮ್ ಇಂಡಿಯಾಕ್ಕೆ ಅದೃಷ್ಟದ ರಕ್ಷೆಯಾಗಿ ಕೈ ಹಿಡಿಯಬೇಕಿದೆ.

ನ್ಯೂಜಿಲೆಂಡ್ ವಿರುದ್ಧ ಗೆಲುವು ಸುಲಭವಲ್ಲ..!

ಐಸಿಸಿ ಏಕದಿನ ಮತ್ತು ಟಿ20 ವಿಶ್ವಕಪ್ಗಳಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 6 ಪಂದ್ಯಗಳನ್ನು ಆಡಿದೆ. 2003ರ ಏಕದಿನ ವಿಶ್ವಕಪ್ ಹೊರತು ಪಡಿಸಿ ಉಳಿದೆಲ್ಲಾ ಕಡೆ ಟೀಮ್ ಇಂಡಿಯಾ ಸೋತಿದೆ. 2007 ರ ಟಿ 20 ವಿಶ್ವಕಪ್, 2016 ರ ಟಿ 20 ವಿಶ್ವಕಪ್, 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ಟೀಮ್ ಇಂಡಿಯಾವನ್ನು ಸೋಲಿಸಿತ್ತು. ಈಗ ಈ ಸೋಲಿನ ಸರಪಳಿಯನ್ನು ಟೀಮ್ ಇಂಡಿಯಾ ಮುರಿಯುವುದು ಅನಿವಾರ್ಯವಲ್ಲ. ಒಟ್ಟಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಟೀಮ್ ಇಂಡಿಯಾಕ್ಕೆ ಅನಿವಾರ್ಯ ಅನ್ನುವುದನ್ನು ಮರೆಯುವ ಹಾಗಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd