ಗಾಂಜಾ ವೆಸನಿ ಬಾಯ್ ಫ್ರೆಂಡ್ ಬೇಡ ಎಂದ್ರೂ ಹಠ ಬಿಡದ ಯುವತಿ : ತಾಯಿ ಆತ್ಮಹತ್ಯೆ ಬೆನ್ನಲ್ಲೇ ಆಕೆ ಏನ್ ಮಾಡಿದ್ಲು ನೋಡಿ..!
ಬೆಂಗಳೂರು : ಟೀನೇಜ್ ನಲ್ಲಿ ಮಾಡೋ ಪ್ರೀತಿ ಯಾವೆಲ್ಲಾ ಅನಾಹುತಗಳಿಗೆ ದಾರಿ ಮಾಡಿ ಕೊಡುತ್ತೆ ಅನ್ನೋದಕ್ಕೆ ಅನೇಕ ಪ್ರಕರಣಗಳು ಸಾಕ್ಷಿಯಾಗಿದೆ.
ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಚೆನ್ನಾಗಿ ಬೆಳೆಯಬೇಕು ಅಂತೆಲ್ಲಾ ತಂದೆ ತಾಯಿ ಕೋಟಿ ಕೋಟಿ ಕನಸು ಕಟ್ಟಿಕೊಂಡಿರುತ್ತಾರೆ. ಆದ್ರೆ ಕೆಲವೊಮ್ಮೆ ಇಂತಹ ಪ್ರೀತಿ ಹುಚ್ಚಾಟಕ್ಕೆ ಬಿದ್ದು ತಮ್ಮ ಜೀವನವನ್ನೂ ಸರ್ವ ನಾಶ ಮಾಡಿಕೊಳ್ಳೋ ಜೊತೆಗೆ ತಂದೆ ತಾಯಿಯ ಆಸೆ ಕನಸುಗಳನ್ನ ಮಣ್ಣುಪಾಲು ಮಾಡ್ತಾರೆ ಕೆಲವರು. ಇಂತವರಲ್ಲಿ ಅತಿ ಹೆಚ್ಚೂ ಟೀನೇಜರ್ಸ್ ಅನ್ನೋದೆ ನಿಜಕ್ಕೂ ಬೇಸರದ ಸಂಗತಿ. ಬೆಂಗಳರಿನಲ್ಲಿ ನಡೆದಿರೋ ಈ ಘಟನೆ ಇದಕ್ಕೆ ಒಂದು ಉದಾಹರಣೆ..
19 ವರ್ಷದ ಯುವತಿಯೊಬ್ಬಳು ಪ್ರೀತಿ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಮಿನಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ವಿಪರ್ಯಾಸವೆಂದ್ರೆ ಈಕೆಯ ಪ್ರೀತಿಯ ಹುಚ್ಚು ಹಠಕ್ಕೆ ಬೇಸತ್ತು ಹೋಗಿದ್ದ ಈಕೆಯ ತಾಯಿ ಶಶಿಕಲಾ ಎಂಬುವವರು ಕಳೆದ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಇದೀಗ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧ, ಮದುವೆಯಾದ್ಮೇಲು ಆಂಟಿ ಹಿಂದೆ ಬಿದ್ದ ಬರ್ಬರವಾಗಿ ಕೊಲೆಯಾದ..!
ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜೆಮಿನಿ ಎಂಬಾಕೆ ಭರತ್ ಎಂಬಾತನ ಜೊತೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪೋಷಕರ ಮಾತನ್ನೂ ಕೇರ್ ಮಾಡದೇ ಭರತ್ ನನ್ನು ಪ್ರೀತಿಸುತ್ತಿದ್ದಳು. ಹೋಗ್ಲಿ ಬಿಡು ಆತನ ಜೊತೆಗೆ ಮದುವೆ ಮಾಡಿಸೋಣ ಅಂತ ನೋಡಿದ್ರೆ ಆತ ಗಾಂಜಾ ವ್ಯಸನಿಯಾಗಿದ್ದನಂತೆ. ಹೀಗಾಗಿ ಆಕಗೆ ಎಷ್ಟೇ ಬುದ್ದಿ ಹೇಳಿದ್ರೂ ಯಾರ ಮಾತು ಕೇಳೋಕು ಆಕೆ ತಯಾರಿರಲಿಲ್ಲ. ಇತ್ತ ಮಗಳ ಹಠಕ್ಕೆ ಬೇಸತ್ತ ತಾಯಿ ನೇಣಿಗೆ ಶರಣಾಗಿದ್ದರು.
ಆನ್ ಲೈನ್ ಜೂಜಿನಲ್ಲಿ 7 ಲಕ್ಷ ಕಳೆದುಕೊಂಡ ವ್ಯಕ್ತಿ : ಎಲ್ಲವನ್ನೂ ಕಳೆದುಕೊಂಡ ನೋವಲ್ಲಿ ಮಾಡಿದ್ದೇನು ನೋಡಿ..!
ತಾಯಿ ಆತ್ಮಹತ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಜೆಮಿನಿ, ಭರತ್ ನಿಂದ ದೂರವಾಗಿದ್ದಳು. ಅಷ್ಟಾದರೂ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ ಭರತ್, ಕಿರುಕುಳ ನೀಡಲಾರಂಭಿಸಿದ್ದ. ನನ್ನನ್ನು ಮದುವೆಯಾಗಬೇಕು. ಇಲ್ಲದಿದ್ದರೆ, ನಿನ್ನ ಜೊತೆಗೆ ತೆಗೆಸಿಕೊಂಡಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದೂ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಇತ್ತೀಚೆಗೆ ಮನೆಗೂ ಹೋಗಿ ಅವಾಚ್ಯ ಶಬ್ದಗಳಿಂದ ಯುವತಿಯನ್ನು ನಿಂದಿಸಿ ಹಲ್ಲೆಯನ್ನೂ ಮಾಡಿದ್ದ ಎನ್ನಲಾಗಿದೆ. ಇದರಿಂದ ನೊಂದ ಯುವತಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಧಕಾರದಲ್ಲಿ ಪಾಕಿಸ್ತಾನ..!
ಮಗಳ ಪ್ರೀತಿಯ ಹುಚ್ಚಾಟಕ್ಕೆ ಪತ್ನಿಯನ್ನೂ ಕಳೆದುಕೊಂಡು ಇದ್ದೊಬ್ಬ ಮಗಳನ್ನ ಕಳೆದುಕೊಂಡ ನೋವಿನಲ್ಲಿಯೇ ಬಾಕಿ ಜೀವನವನ್ನ ನಡೆಸುವಂತಹ ಸ್ಥಿತಿ ಜೆಮಿನಿ ತಂದೆಗೆ ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








