Telangana : ತಂದೆಯ ಎದುರೇ 18 ವರ್ಷದ ಯವತಿ ಕಿಡ್ನಾಪ್…
ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ 18 ವರ್ಷದ ಯುವತಿಯನ್ನು ಆಕೆಯ ತಂದೆಯ ಎದುರೇ ನಾಲ್ವರು ವ್ಯಕ್ತಿಗಳು ಅಪಹರಿಸಿದ್ದಾರೆ ಘಟನೆ ನಡೆದಿದೆ. ಚಂದೂರ್ತಿ ಮಂಡಲದ ಮೂಡೆಪಲ್ಲಿ ಗ್ರಾಮದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ತಂದೆ ಮತ್ತು ಮಗಳು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಯುವತಿಯನ್ನ ಬಲವಂತವಾಗಿ ಕಿಡ್ನಾಪ್ ಮಾಡುತ್ತಿರುವ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದೆ. ಕಿಡ್ನಾಪ್ ಮಾಡಿದ ವ್ಯಕ್ತಿ ಜ್ಞಾನೇಶ್ವರ್ ವಿರುದ್ಧ ಅಪಹರಣಕ್ಕಾದ ಹುಡುಗಿ ಈ ಹಿಂದೆ ಅವನೊಂದಿಗೆ ಓಡಿಹೋಗಿ ವಿವಾಹವಾಗಿದ್ದ ಕಾರಣ ಈ ಹಿಂದೆಯ ಅವನ ವಿರುದ್ಧ ಕೇಸ್ ದಾಖಲಾಗಿತ್ತು. ಆಗ ಬಾಲಕಿ ಅಪ್ರಾಪ್ತಳಾಗಿದ್ದಳು.
ಈಗ ಅಪಹರಣಕ್ಕೊಳಗಾದ ಬಾಲಕಿ ದೊಡ್ಡವಳಾಗಿದ್ದು ತಂದೆಯಿಂದ ದೂರ ಮಾಡಲು ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪಹರಣಕ್ಕೊಳಗಾದವರ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ, ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಮದುವೆಯನ್ನ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಯಿಸಿದ್ದರಿಂದ ಸ್ನೇಹಿತರೊಂದಿಗೆ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ಕೆಲವು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ನಿಯೋಜಿಸಲಾಗಿದೆ ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
Telangana: 18-year-old girl kidnapped in front of her father…