ರಾಷ್ಟ್ರ ರಾಜಕಾರಣಕ್ಕಿಳಿದ ಕೆಸಿಆರ್ – ಪಕ್ಷದ ಹೆಸರು ಬದಲಾವಣೆ – TRS ಇನ್ನು ಮುಂದೆ BRS
ರಾಷ್ಟ್ರ ರಾಜಕೀಯದಲ್ಲಿ ಪದಾರ್ಪಣೆ ಮಾಡಲು ಉತ್ಸಾಹ ತೋರಿಸುತ್ತಿರುವ ಕೆಸಿಆರ್ ಪಕ್ಷದ ಹೆಸರನ್ನ ಬದಲಾಯಿಸುವ ಮೂಲಕ ರಾಷ್ಟ್ರ ರಾಜಕ್ಕಿಯಕ್ಕೆ ಇಳಿಯುದನ್ನ ಅಧಿಕೃತವಾಗಿ ತಿಳಿಸಿದ್ದಾರೆ.
ಪಕ್ಷದ ಪ್ರಧಾನ ಕಛೇರಿಯಲ್ಲಿ ಇಂದು ನಡೆದ ಸಭೆಯಲ್ಲಿ “ತೆಲಂಗಾಣ ರಾಷ್ಟ್ರ ಸಮಿತಿ” ಎಂಬ ಹೆಸರನ್ನ ‘ಭಾರತ ರಾಷ್ಟ್ರ ಸಮಿತಿ ಎಂದು ಬದಲಾಗಿಸಲಾಗಿದೆ.
ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ.. ಇನ್ನು ಮುಂದೆ ಭಾರತ್ ರಾಷ್ಟ್ರ ಸಮಿತಿಯಾಗಲಿದೆ. ತೆಲಂಗಾಣ ಪ್ರದೇಶದಿಂದ ರಾಷ್ಟ್ರೀಯ ಮಟ್ಟದ ಪಕ್ಷವಾಗಿ ಪರಿವರ್ತನೆಯಾಗಲಿದೆ. ಚಳವಳಿ ಪಕ್ಷದಿಂದ ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿ ಆರಂಭವಾದ ಕೆಸಿಆರ್ ಆಳ್ವಿಕೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮಟ್ಟ ತಲುಪಲಿದೆ. ತೆಲಂಗಾಣ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಹೆಸರು ಬದಲಾವಣೆಗೆ ಪ್ರಸ್ತಾಪಿಸಲಾದ ನಿರ್ಣಯವನ್ನು 283 ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
ವಿಜಯದಶಮಿ ದಿನದಂದು ಕೆಸಿಆರ್ ತಮ್ಮ ರಾಷ್ಟ್ರೀಯ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.
TRS now ‘Bharata Rashtra Samiti’, KCR steps out of Telangana, enters national politics