Telegram Premium: ಟೆಲಿಗ್ರಾಂ ಶುಲ್ಕ ಆಧಾರಿತ ಪ್ರೀಮಿಯಂ ಸೇವೆ ಪ್ರಾರಂಭ….
ಮಲ್ಟಿಮೀಡಿಯಾ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ತನ್ನ ಪ್ರೀಮಿಯಂ ಸೇವೆಯನ್ನ ಪ್ರಾರಂಭಿಸಿದೆ. ಪ್ರೀಮಿಯಂ ಸೇವೆಯೊಂದಿಗೆ, ಬಳಕೆದಾರರು 4 GB ವರೆಗಿನ ಫೈಲ್ಗಳನ್ನು ಅಪ್ಲೋಡ್ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ಧ್ವನಿ ಸಂದೇಶಗಳನ್ನು ಪಠ್ಯವಾಗಿ ಪರಿವರ್ತಿಸುವ ಅವಕಾಶವಿರುತ್ತದೆ.
ಪ್ರತಿ ತಿಂಗಳು 469 ರೂಪಾಯಿ
ಭಾರತೀಯ ಮಾರುಕಟ್ಟೆಯಲ್ಲಿ, ಟೆಲಿಗ್ರಾಮ್ ಪ್ರೀಮಿಯಂ ಸೇವೆಯು ತಿಂಗಳಿಗೆ ರೂ 469 ಎಂದು ನಿಗಧಿಪಡಿಸಲಾಗಿದೆ. ಇದು ಐಫೋನ್ ಬಳಕೆದಾರರಿಗೆ ಮಾತ್ರ. ಆಂಡ್ರಾಯ್ಡ್ ಬಳಕೆದಾರರಿಗೆ ಪ್ರೀಮಿಯಂ ಪ್ಲಾನ್ನ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿಲ್ಲ.
ಟೆಲಿಗ್ರಾಮ್ ಪ್ರೀಮಿಯಂ ನ ಪ್ರಯೋಜನಗಳು
ಟೆಲಿಗ್ರಾಮ್ ಪ್ರೀಮಿಯಂ ಗೆ ಮಾಸಿಕ ಚಂದಾದಾರರಾದ ನಂತರ 4 GB ವರೆಗಿನ ಫೈಲ್ಗಳನ್ನು ಅಪ್ಲೋಡ್ ಮಾಡಬಹುದು. ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ ಫೈಲ್ ಗಳನ್ನ ವೇಗವಾಗಿ ಡೌನ್ಲೋಡ್ ಮಾಡಬಹುದು. ಇದಲ್ಲದೆ, ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರು 1,000 ಚಾನಲ್ಗಳನ್ನು ಫಾಲೋ ಮಾಡಲು ಸಾಧ್ಯವಾಗುತ್ತದೆ ಮತ್ತು 20 ಚಾಟ್ ಫೋಲ್ಡರ್ಗಳನ್ನು ಸಹ ರಚಿಸಬಹುದು.
ಪ್ರೀಮಿಯಂ ಬಳಕೆದಾರರು 10 ಚಾಟ್ಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ನಾಲ್ಕು ಖಾತೆಗಳನ್ನು ಸಹ ರಚಿಸಬಹುದು. ಪ್ರೀಮಿಯಂ ಬಳಕೆದಾರರು ಲಿಂಕ್ನೊಂದಿಗೆ ದೀರ್ಘ ಬಯೋವನ್ನು ಸಹ ಬರೆಯಬಹುದು. ಇದಲ್ಲದೆ, ಬಳಕೆದಾರರು ಧ್ವನಿ ಸಂದೇಶಗಳನ್ನು ಪಠ್ಯವಾಗಿ ಪರಿವರ್ತಿಸುವ ಅವಕಾಶವನ್ನು ಸಹ ಪಡೆಯುತ್ತಾರೆ.