ಶೀಘ್ರದಲ್ಲೇ Telegram ಪ್ರೀಮಿಯಂ ಸೇವೆ – ಹಣ ಪಾವತಿಸಿ ಚಂದಾದಾರಿಕೆ…
ವಾಟ್ಸಪ್ ಗೆ ಪ್ರತಿಸ್ಪರ್ದಿಯಾಗಿರುವ ಮೆಸೇಂಜರ್ ಆಪ್ ಟೆಲಿಗ್ರಾಮ್ ಹಣ ಪಾವತಿಸಿದ ಆವೃತ್ತಿ ಅಂದರೆ ಚಂದಾದಾರಿಕೆ ಆಧಾರಿತ ಸೇವೆಯನ್ನ ಈ ತಿಂಗಳು ಭಾರತದಲ್ಲಿ ಪ್ರಾರಂಭಿಸಲಾಗುವುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಈ ಮಾಹಿತಿ ನೀಡಿದ್ದಾರೆ. ಉಚಿತ ಟೆಲಿಗ್ರಾಂ ಸೇವೆ ಎಂದಿನಂತೆ ಇರಲಿದೆ.
ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರು ಚಾಟ್ ಮಿತಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ. ಇದಲ್ಲದೇ ದೊಡ್ಡ ಮೀಡಿಯಾ ಫೈಲ್ ಗಳನ್ನು ಅಪ್ ಲೋಡ್ ಮಾಡುವ ಸೌಲಭ್ಯ ದೊರೆಯಲಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಪೊವೆಲ್ ಹೇಳಿದ್ದಾರೆ. “ನಮ್ಮ ಅಸ್ತಿತ್ವದಲ್ಲಿರುವ ಫೀಚರ್ಗಳನ್ನ ಉಚಿತವಾಗಿ ಇರಿಸಿಕೊಂಡು ನಮ್ಮ ಹೆಚ್ಚು ಬೇಡಿಕೆಯಿರುವ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ಪಾವತಿಸಿದ ಸೇವೆಯ ಅಗತ್ಯವಿದೆ.
ಟೆಲಿಗ್ರಾಮ್, ಸಿಗ್ನಲ್ ಮತ್ತು ವಾಟ್ಸಾಪ್‌ನೊಂದಿಗೆ ನೇರ ಸ್ಪರ್ಧೆಯನ್ನು ಹೊಂದಿದೆ. ಪ್ರಸ್ತುತ, ಟೆಲಿಗ್ರಾಮ್‌ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು 500 ಮಿಲಿಯನ್ ಆಗಿದೆ. ಟೆಲಿಗ್ರಾಮ್ ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪಾವತಿಸಿದ ಸೇವೆಯನ್ನು ಪ್ರಾರಂಭಿಸುವುದರಿಂದ ಉಚಿತ ಬಳಕೆದಾರರಿಗೆ ಜಾಹೀರಾತುಗಳನ್ನು ತೋರಿಸಲಾಗುತ್ತದೆ ಎಂದು ಅರ್ಥವಲ್ಲ ಎಂದು ಕಂಪನಿಯ ಸಂಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.
ಟೆಲಿಗ್ರಾಮ್ ಬಳಕೆದಾರರಿಗೆ ಟೆಲಿಗ್ರಾಮ್ ಶಾಶ್ವತವಾಗಿ ಉಚಿತವಾಗಿರುತ್ತದೆ. ಪಾವತಿಸಿದ ಸೇವೆಯಿಂದ ಕಂಪನಿಯು ಆದಾಯವನ್ನು ನಿರೀಕ್ಷಿಸುತ್ತದೆ. ಟೆಲಿಗ್ರಾಮ್‌ನ ಪಾವತಿಸಿದ ಸೇವೆಯೊಂದಿಗೆ ಅನಿಯಮಿತ ಕ್ಲೌಡ್ ಸ್ಟೋರೇಜ್ ಸೌಲಭ್ಯವು ಲಭ್ಯವಿರುತ್ತದೆ. ಹೊಸ ಆವೃತ್ತಿಯೊಂದಿಗೆ, ಉಚಿತ ಅಡಿಬರಹವನ್ನು ಸಹ ತೆಗೆದುಹಾಕಲಾಗಿದೆ. ಪಾವತಿಸಿದ ಸೇವೆಯೊಂದಿಗೆ ಹೊಸ ಮತ್ತು 3D ಸ್ಟಿಕ್ಕರ್‌ಗಳು ಸಹ ಲಭ್ಯವಿರಲಿವೆ.